ಅಯೋಧ್ಯೆ ರಾಮಮಂದಿರದಲ್ಲಿ ಭಕ್ತ ಸಾಗರ: ಆರತಿ, ದರುಶನ ಸಮಯ ಪರಿಷ್ಕರಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲಾ ದರ್ಶನಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಕಾರಣ ಭಕ್ತರ ಸುಗಮ ನಿರ್ವಹಣೆಗೆಅಯೋಧ್ಯಾ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌, ಆರತಿ ಹಾಗೂ ದರ್ಶನದ ಸಮಯ ಬದಲಿಸಲು ಮುಂದಾಗಿದೆ. ದೈನಂದಿನ ಆರತಿ ಹಾಗೂ ದರ್ಶನದ ಪರಿಷ್ಕೃತ ವೇಳಾಪಟ್ಟಿ ಪ್ರಕಟ ಮಾಡಿದೆ.

ಅಯೋಧ್ಯಾ ರಾಮ ಮಂದಿರದ ಗರ್ಭ ಗೃಹದಲ್ಲಿ ಇರುವ ರಾಮಲಲಾ ಮೂರ್ತಿಗೆ ಸಲ್ಲಿಸಲಾಗುವ ಬೆಳಗಿನ ಆರತಿಯನ್ನು ಶೃಂಗಾರ ಆರತಿ ಎಂದು ಕರೆಯಲಾಗುತ್ತದೆ. ಇದಾದ ಕೆಲವು ಗಂಟೆಗಳ ಬಳಿಕ ಮಂಗಳ ಆರತಿ ನೆರವೇರುತ್ತದೆ. ಇದಿಗ ಎರಡೂ ಆರತಿಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಶೃಂಗಾರ ಆರತಿಯನ್ನು ಪ್ರತಿ ದಿನ ಬೆಳಗ್ಗೆ 4.30ಕ್ಕೆ ನೆರವೇರಿಸಲು ತೀರ್ಮಾನಿಸಲಾಗಿದೆ. ಇನ್ನು ಮಂಗಳ ಆರತಿಯನ್ನು 6.30ಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಆರತಿ ಹಾಗೂ ಪ್ರಾರ್ಥನೆ ಬಳಿಕ ಬೆಳಗ್ಗೆ 7 ರಿಂದಲೇ ಭಕ್ತಾದಿಗಳು ರಾಮಲಲಾ ದರ್ಶನ ಪಡೆಯಬಹುದಾಗಿದೆ.

ಇನ್ನು ಮಧ್ಯಾಹ್ನದ ವೇಳೆಗೆ ಭೋಗ ಆರತಿ ನೆರವೇರಲಿದೆ. ಸಂಧ್ಯಾ ಆರತಿ ಸಂಜೆ 7.30ಕ್ಕೆ ನಡೆಯಲಿದೆ. ರಾತ್ರಿ 8ಕ್ಕೆ ನೈವೇದ್ಯ ಆರತಿ ನೆರವೇರಲಿದೆ. ಅಂತಿಮವಾಗಿ ರಾತ್ರಿ 10 ಗಂಟೆಗೆ ಶಯನ ಆರತಿ ನೆರವೇರಲಿದೆ. ಶಯನ ಆರತಿಯು ಆ ದಿನದ ಕೊನೆಯ ಆರತಿ ಆಗಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ವಕ್ತಾರ ಹಾಗೂ ಮಾಧ್ಯಮ ಘಟಕದ ಮುಖ್ಯಸ್ಥ ಶರದ್ ಶರ್ಮಾ ಅವರು ಮಾಹಿತಿ ನೀಡಿದ್ಧಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!