ಭಾಲ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವೆ: ಚಾಂದಿವಾಲೆ

ಹೊಸ ದಿಗಂತ ವರದಿ, ಬೀದರ:

ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು 2018 ರಲ್ಲಿಯೇ ಪತಂಜಲಿ ಯೋಗ ಸಮಿತಿಯ ಯೋಗ ಗುರು ರಾಮದೇವ ಬಾಬಾ ಅವರ ಆರ್ಶೀವಾದ ಮತ್ತು ಶಿಫಾರಸ್ಸಿನೊಂದಿಗೆ ಬಯಸಿ ಅರ್ಜಿ ಸಲ್ಲಿಸಿದ್ದೆ. ಆದರೆ ಡಿ.ಕೆ. ಸಿದ್ರಾಮ ಅವರು ತಮ್ಮ ಮೇಲೆ ತೀವ್ರ ಒತ್ತಡ ಹೇರಿ ಇದೊಂದು ಸಲ ಮಾತ್ರ ತಮಗೆ ಅವಕಾಶ ಕೊಡಿ ನಾನು ಸೋತರೆ ಮುಂದಿನ ಅಭ್ಯರ್ಥಿ ನೀವೇ ಎಂದು ತಮಗೆ ಆಶ್ವಾಸನೆ ನೀಡಿದ್ದರಿಂದ ಮತ್ತು ರಾಜ್ಯ ಬಿಜೆಪಿ ವರಿಷ್ಠರ ತೀರ್ಮಾನದಂತೆ ಅವರಿಗೂ ತಿಳಿಸಿ ಹಿಂದೆ ಸರಿದಿದ್ದೆ. 2023ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದೇನೆ ಎಂದು ಬಿಜೆಯ ಮುಖಂಡ ಮತ್ತು ಯೋಗಗುರು ಧೋಂಡಿರಾಮ ಚಾಂದಿವಾಲೆ ಹೇಳಿದ್ದಾರೆ.

ಅವರು ಇಂದು ಬೀದರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಮತ್ತು 15 ವರ್ಷಗಳಿಂದ ಬೀದರ ನಗರದಲ್ಲಿರುವ ಬರೀಶಾಹಿ ಗಾರ್ಡನ್ ಆವರಣದಲ್ಲಿ ಉಚಿತ ಯೋಗ ತರಬೇತಿ ತೆಗದುಕೊಳ್ಳುತ್ತಿದ್ದು, ಪತಂಜಲಿ ಯೋಗ ಸಮಿತಿಯ ಸರ್ವ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಸ್ವದೇಶಿ ವಸ್ತುಗಳ ಜಾಗೃತಿ ಅಭಿಯಾನ ನಡೆಸುತ್ತಾ ಸಾಮಾಜಿಕ ಸೇವೆ ಮಾಡುತ್ತಾ ಸಕ್ರೀಯವಾಗಿ ದುಡಿಯುತ್ತಿರುವೆ ಎಂದು ತಿಳಿಸಿದ ಅವರು , ಈ ಸಲದ ಚುನಾವಣೆಯಲ್ಲಿ ತಾವು ಮತ್ತೆ ಟಿಕೇಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸುವೆ. ತಮ್ಮ ಬಯಕೆ ಈಡೇರಿಸಲು ಯೋಗ ಗುರು ರಾಮದೇವ ಬಾಬಾರ ಆರ್ಶಿವಾದ ಇದೆ. ಮತ್ತು ಕರ್ನಾಟಕ ರಾಜ್ಯ ಪ್ರಭಾರಿಗಳಾದ ಭವರಲಾಲ್ ಆರ್ಯ ಅವರ ಸಂಪೂರ್ಣ ಸಹಕಾರವಿದೆ ಎಂದರು.

ತಾವು ಈಗಾಗಲೆ ಕ್ಷೇತ್ರದಲ್ಲಿ ಪ್ರವಾಸ ಕೈಕೊಂಡು ಅಭ್ಯರ್ಥಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದಾಗ ಮಹಾಜನತೆ ತಮಗೆ ಸಹಮತ ವ್ಯಕ್ತಪಡಿಸಿದ್ದಾರೆ ಮತ್ತು ಈ ಸಲವೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಧೊಂಡಿರಾಮ ಚಾಂದಿವಾಲೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!