Tuesday, March 28, 2023

Latest Posts

ಈಶಾನ್ಯಕ್ಕೆ ಮಾರ್ಚ್ 21ರಿಂದ ಭಾರತ್ ಗೌರವ್ ರೈಲು ಸೇವೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತೀಯ ರೈಲ್ವೆ ಈ ತಿಂಗಳ 21ರಿಂದ ಈಶಾನ್ಯಕ್ಕೆ ಭಾರತ್ ಗೌರವ್ ರೈಲನ್ನು ಪ್ರಾರಂಭಿಸಲಿದೆ. ಎಸಿ ಡಿಲಕ್ಸ್ ಭಾರತ್ ಗೌರವ್ ರೈಲು 15 ದಿನಗಳಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯಗಳಲ್ಲಿ ಸಂಚರಿಸಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಈಶಾನ್ಯ ಸರ್ಕ್ಯೂಟ್‌ನ ಥೀಮ್ “ನಾರ್ತ್ ಈಸ್ಟ್ ಡಿಸ್ಕವರಿ: ಬಿಯಾಂಡ್ ಗುವಾಹಟಿ” ಆಗಿದೆ. ಭಾರತ್ ಗೌರವ್ ಡಿಲಕ್ಸ್ ಟೂರಿಸ್ಟ್ ರೈಲು ನವದೆಹಲಿ ಸಫ್ರ್ದುರ್ಜಂಗ್ ರೈಲು ನಿಲ್ದಾಣದಿಂದ ಹೊರಡಲಿದೆ, ಒಟ್ಟು 156 ಪ್ರವಾಸಿಗರಿಗೆ ಅವಕಾಶ ಕಲ್ಪಿಸುತ್ತದೆ ಮತ್ತು AC 1 ಮತ್ತು AC 2 ಶ್ರೇಣಿಗಳೊಂದಿಗೆ ಹವಾನಿಯಂತ್ರಿತವಾಗಿದೆ.

ಈ ರೈಲು ಮೊದಲು ಗುವಾಹಟಿಯಲ್ಲಿ ನಿಲುಗಡೆ ನೀಡಲಿದೆ. ಇಲ್ಲಿ ಪ್ರವಾಸಿಗರು ಕಾಮಾಖ್ಯ ದೇವಸ್ಥಾನ ಮತ್ತು ಉಮಾನಂದ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಕೋವಿಡ್-19 ವಿರುದ್ಧ ಸುರಕ್ಷತಾ ಕ್ರಮವಾಗಿ, ರೈಲ್ವೇ ಸಚಿವಾಲಯವು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಅತಿಥಿಗಳಿಗೆ ಸಂಪೂರ್ಣ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ಎಲ್ಲಾ ಇತರ ಬುಕಿಂಗ್ ವಿವರಗಳು IRCTC ವೆಬ್ ಪೋರ್ಟಲ್‌ನಲ್ಲಿ ಲಭ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!