Monday, September 26, 2022

Latest Posts

ಭಾರತ್ ಜೋಡೋ ಯಾತ್ರಾ ಪೋಸ್ಟರ್ ನಲ್ಲಿ ವೀರ್ ಸಾವರ್ಕರ್ ಫೋಟೋ ವೈರಲ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಕಾಂಗ್ರೆಸ್ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್ ನಲ್ಲಿ ವೀರ ಸಾವರ್ಕರ್​ ಅವರ ಪೋಟೋವನ್ನು ಅಳವಡಿಸಲಾಗಿದೆ.

ಪಕ್ಷದ ದೇಶವ್ಯಾಪಿ ಅಭಿಯಾನದ ಭಾಗವಾಗಿರುವ ಬ್ಯಾನರ್ ನಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್, ಗೋವಿಂದ್ ವಲ್ಲಭ್ ಪಂತ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಇತರ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳ ನಡುವೆ ಬಿಜೆಪಿಯ ಪ್ರಮುಖ ಸೈದ್ಧಾಂತಿಕ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಚಿತ್ರ ಪ್ರಿಂಟ್‌ ಆಗಿದೆ.

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ‘ಭಾರತ್ ಜೋಡೋ ಯಾತ್ರೆ’ಯ ಪೋಸ್ಟರ್ ಚಿತ್ರವನ್ನು ಟ್ವೀಟ್ ಮಾಡಿದ್ದು. ಇದು ಸ್ವಾತಂತ್ರ್ಯ ಹೋರಾಟಗಾರರಲ್ಲಿ ವೀರ ಸಾವರ್ಕರ್ ಅವರ ಫೋಟೋವನ್ನು ಸಹ ಹೊಂದಿದೆ. ಈ ವಿಷಯದಲ್ಲಿ, ಕಾಂಗ್ರೆಸ್ ತನ್ನನ್ನು ತಾನು ಸಮರ್ಥಿಸಿಕೊಂಡಿದೆ ಅಂತ ಹೇಳಿದ್ದಾರೆ.

ತಪ್ಪಾಗಿ ಮುದ್ರಣ- ಕಾಂಗ್ರೆಸ್​ ಸ್ಪಷ್ಟನೆ
ಈ ನಡುವೆ ಕಾಂಗ್ರೆಸ್‌ ಇದನ್ನು ಮುದ್ರಣ ತಪ್ಪು ಎಂದು ಕರೆದಿದೆ. ಪೋಸ್ಟರ್ ನಲ್ಲಿ ಪೋಸ್ಟರ್ ಅನ್ನು ವಿನ್ಯಾಸಗೊಳಿಸಿದ ಹುಡುಗ ಸ್ವಾತಂತ್ರ್ಯ ಹೋರಾಟಗಾರರ ಈ ಫೋಟೋಗಳನ್ನು ಆನ್ ಲೈನ್ ನಲ್ಲಿ ತೆಗೆದುಕೊಂಡಿದ್ದಾನೆ ಎಂದು ಬೂತ್ ಮಟ್ಟದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!