ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ವಿಶ್ವಕಪ್ ಕ್ರಿಕೆಟ್-2023 ರ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ, ಭಾನುವಾರ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರನಿಗೆ ಭಸ್ಮಾರತಿ ಸೇವೆ ಮಾಡಲಾಯಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯಲಿರುವ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯವಾಗಲಿ ಎಂದು ಪ್ರಾರ್ಥಿಸಿ ಉಜ್ಜಯಿನಿ ದೇವಸ್ಥಾನ ಹಾಗೂ ದೇಶದ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ಶಿವನ ದೇವಸ್ಥಾನದಲ್ಲಿ ಪ್ರತ್ಯೇಕ ಜಲದಿಂದ ಅಭಿಷೇಕ
ಟೀಂ ಇಂಡಿಯಾದ ಯಶಸ್ಸಿಗೆ ಹಾರೈಸಿ ಮಧ್ಯಪ್ರದೇಶ ರಾಜ್ಯದ ಬೈಧ್ಯನಾಥ ಮಹಾದೇವ ದೇವಸ್ಥಾನದಲ್ಲಿ 11 ಪಂಡಿತರು ವಿಶೇಷ ನೀರಿನಿಂದ ಅಭಿಷೇಕ ಮಾಡಿದರು.
ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಜಯವಾಗಲಿ ಎಂದು ಹಾರೈಸಿ ಶಿವನ ದೇವಸ್ಥಾನದಲ್ಲಿ ಹಾಲು, ಮೊಸರು ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡಲಾಯಿತು. ಈ ವಿಶೇಷ ಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಅಂತಿಮ ಪಂದ್ಯದಲ್ಲಿ ಭಾರತ ತಂಡಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿದರು.