ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನೋಡಲು ಭವಾನಿ ರೇವಣ್ಣ ಜೈಲಿಗೆ ಬಂದಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರೋಕೇಂದ್ರ ಕಾರಾಗೃಹಕ್ಕೆ ಭವಾನಿ ರೇವಣ್ಣ ಆಗಮಿಸಿದ್ದಾರೆ.
ಈಗಾಗಲೇ ಎಚ್ಡಿ ರೇವಣ್ಣ ಸಂಪೂರ್ಣ ಕುಟುಂಬ ಕಾನೂನು ಸಂಕಷ್ಟ ಎದುರಿಸುತ್ತಿದೆ. ಇಬ್ಬರೂ ಪುತ್ರರೂ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಸಿಐಡಿ ಕಸ್ಟಡಿ ಹಾಗೂ ಜೈಲು ಸೇರಿದ್ದಾರೆ. ಖುದ್ದು ಎಚ್ಡಿ ರೇವಣ್ಣ ಜೈಲಿಗೆ ಹೋಗಿ ಬಂದಿದ್ರೆ, ಭವಾನಿ ಕೂಡ ಜಾಮೀನು ಪಡೆದಿದ್ದಾರೆ. ಈ ಎಲ್ಲಾ ಘಟನೆಗಳಿಂದ ಮುಜುಗರಕ್ಕೆ ಒಳಗಾಗಿರೋ ಭವಾನಿ ರೇವಣ್ಣ ಜೈಲಿಗೆ ಬರುವ ವೇಳೆ ಮಾಧ್ಯಮಗಳಿಗೆ ಮುಖ ಕಾಣಿಸದಂತೆ ಮುಖ ಮುಚ್ಚಿಕೊಂಡು ಬಂದರು. ತಮ್ಮ ಕಾರು ಡ್ರೈವರ್ ಮತ್ತು ಪಿಎ ಜೊತೆಗೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದರು.