ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪವನ್ ಕಲ್ಯಾಣ್ ಅವರ “ಭೀಮ್ಲಾ ನಾಯಕ್” ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಸದ್ಯದಲ್ಲೇ ಚಿತ್ರದ ಕಲೆಕ್ಷನ್ 200 ಕೋಟಿ ರೂ. ಗಡಿ ದಾಟಲಿದೆ.
ಬಿಡಗುಗಡೆಯಾದ ಒಂದು ವಾರಕ್ಕೆ ಬರೋಬ್ಬರಿ 200 ಕೋಟಿ ರೂ. ಗಳಿಸುವತ್ತ ಸಾಗುತ್ತಿರುವ ಚಿತ್ರ ಕಂಡು ಸಿನಿಪ್ರಿಯರು ಖುಷಿಯಾಗಿದ್ದಾರೆ. ಭಾರತ ಮಾತ್ರವಲ್ಲದೆ ಅಮೆರಿಕಲ್ಲೂ ಸಿನಿಮಾ ಉತ್ತಮ ಪ್ರದರ್ಶನ ನೀಡುತ್ತಿದೆ.
ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ಭೀಮ್ಲಾ ನಾಯಕ್ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ಬರೆದಿದ್ದಾರೆ. ಈವರೆಗೆ193.41 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ.
ಈ ಚಿತ್ರಕ್ಕೆ ಸಾಗರ್.ಕೆ. ಚಂದ್ರಾ ನಿರ್ದೇಶನ ಮಾಡುತ್ತಿದ್ದು, ಸಿತಾರಾ ಎಂಟರ್ಟೈನ್ ಮೆಂಟ್ ಸಂಸ್ಥೆ ಈ ಚಿತ್ರಕ್ಕೆ ಹೂಡಿಕೆ ಮಾಡಿದೆ.