ಸುಳ್ಳು ವಿಚಾರ ಹೇಳೋದ್ರಲ್ಲಿ ಭಿಕಾರಿಸ್ತಾನ್‌ ನಂ.1.. ಮತ್ತೆ ಬುರುಡೆ ಬಿಟ್ಟ ಪಾಕ್ ಪ್ರಧಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತ್ತೊಮ್ಮೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಸುಳ್ಳು ವಿಚಾರ ಹೇಳುವ ಮೂಲಕ ಬುರುಡೆ ಬಿಟ್ಟಿದ್ದಾರೆ. ಇಷ್ಟಕ್ಕೂ ಹೇಳಿರುವುದಾದರೂ ಏನು ಗೊತ್ತಾ? ಭಾರತದ ದಾಳಿಯನ್ನು ಪಾಕ್ ವಿಫಲಗೊಳಿಸಿದೆ ಎಂದು ಸುಳ್ಳು ವಿಚಾರ ಹೇಳಿದ್ದಾರೆ.

ಈ ದಾಳಿ ಅಚ್ಚರಿ ಮೂಡಿಸಿತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಭಾರತೀಯ ವಿಮಾನಗಳು ತಮ್ಮ ದೇಶವನ್ನು ಪ್ರವೇಶಿಸಿದರೆ ಸಮುದ್ರಕ್ಕೆ ಎಸೆಯಲು ಪಾಕಿಸ್ತಾನ ವಾಯುಪಡೆ ಸಿದ್ಧವಾಗಿದೆ ಮತ್ತು ಅದಕ್ಕಾಗಿ ಕಾಯುತ್ತಿದೆ. ಪಾಕಿಸ್ತಾನವು 5 ರಫೇಲ್ ಜೆಟ್‌ಗಳು ಮತ್ತು 2 ಡ್ರೋನ್‌ಗಳನ್ನು ಹೊಡೆದುರುಳಿಸಿದೆ, ಪಾಕಿಸ್ತಾನ ವಾಯುಪಡೆಯು ಪ್ರತೀಕಾರ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ರಾತ್ರಿಯನ್ನು ಐತಿಹಾಸಿಕ ರಾತ್ರಿಯನ್ನಾಗಿ ಮಾಡಿತು ಎಂದು ಹುಚ್ಚರಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ.

ಇನ್ನು ದಾಳಿಯಲ್ಲಿ ಮಕ್ಕಳು, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಅನೇಕ ಪಾಕಿಸ್ತಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಪಾಕ್‌ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!