September 30, 2026
Wednesday, September 30, 2026
spot_img

FOOD | ಸ್ವಲ್ಪವೂ ಲೋಳೆ ಬರದಂತೆ ಮಾಡ್ಬೋದು ಬೆಂಡೇಕಾಯಿಯ ಚಟ್ನಿ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಬೆಂಡೇಕಾಯಿ- ಕಾಲು ಕೆಜಿ
ಹಸಿಮೆಣಸಿನಕಾಯಿ- ಹತ್ತು( ಹೆಚ್ಚು ಕಡಿಮೆ ಮಾಡಿಕೊಳ್ಳಿ
ಬೆಳ್ಳುಳ್ಳಿ – ನಾಲ್ಕು ಎಸಳು
ಉಪ್ಪು
ಕೊತ್ತಂಬರಿ ಕಡ್ಡಿ

ಮಾಡುವ ವಿಧಾನ
ಮೊದಲು ಹೆಂಚಿಗೆ ಎಣ್ಣೆ ಹಾಕಿಕೊಳ್ಳಿ, ಅದಕ್ಕೆ ಬೆಂಡೇಕಾಯಿ ಹಾಗೂ ಹಸಿಮೆಣಸು ಹಾಕಿ ಹುರಿದುಕೊಳ್ಳಿ
ನಂತರ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಉಪ್ಪು ಹಾಕಿ ಬಾಡಿಸಿ
ಬೆಂಡೇಕಾಯಿ ಕಪ್ಪಗೆ ಆಗುವವರೆಗೂ ಹುರಿಯಿರಿ
ಆನಂತರ ಇದನ್ನು ತಣ್ಣಗಾಗಲು ಬಿಡಿ, ಕಡೆಗೆ ಮಿಕ್ಸಿಗೆ ಹಾಕಿ
ಕೊತ್ತಂಬರಿ ಸೊಪ್ಪು ಹಾಗೂ ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿ
ತರಿತರಿಯಾಗಿ ರುಬ್ಬಿದ್ರೆ ಚಟ್ನಿ ರೆಡಿ

Must Read