ಹೊಟೇಲ್‌ನಲ್ಲಿ ಶವವಾಗಿ ಪತ್ತೆಯಾದ ಚಲನಚಿತ್ರ ನಿರ್ದೇಶಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಿತ್ರೀಕರಣಕ್ಕೆಂದು ತೆರಳಿದ್ದ ಸಿನಿಮಾ ನಿರ್ದೇಶಕರೊಬ್ಬರು ಹೊಟೇಲ್​ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಸೋನ್​ಭದ್ರದಲ್ಲಿ ನಡೆದಿದೆ.

ಮೃತ ಸುಭಾಷ್​ಚಂದ್ರ ತಿವಾರಿ ಭೋಜ್‌ಪುರಿ ಚಲನಚಿತ್ರ ನಿರ್ದೇಶಕರಾಗಿದ್ದು, ಮಹಾರಾಷ್ಟ್ರ ಮೂಲದವರು.

ಬುಧವಾರದಂದು ಸಿನಿಮಾ ಚಿತ್ರೀಕರಣ ವೇಳೆ ಸುಭಾಷ್​ ಹಾಗೂ ಚಿತ್ರ ತಂಡ ಸೋನ್​ಭದ್ರದ ಹೊಟೇಲ್‌ನಲ್ಲಿ ತಂಗಿದ್ದರು. ಅದೇ ದಿನ ರಾತ್ರಿ ಸುಭಾಷ್​ ಶವವಾಗಿ ಪತ್ತೆಯಾಗಿದ್ದಾರೆ.

“ಸುಭಾಷ್​ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಶವವನ್ನು ವಶಕ್ಕೆ ಪಡೆದಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹೆಚ್ಚಿನ ತನಿಖೆ ನಡೆಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!