ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೋಪಾಲ್ ಅನಿಲ ದುರಂತ ಸಂಭವಿಸಿದ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ 10 ಟನ್ ವಿಷಕಾರಿ ತ್ಯಾಜ್ಯವನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೀಥಂಪುರದಲ್ಲಿ ದಹಿಸಲಾಗಿದೆ.
ದುರಂತದಿಂದ ನಿಷ್ಕ್ರಿಯಗೊಂಡಿರುವ ಯೂನಿಯನ್ ಕಾರ್ಬೈಡ್ ಕಂಪನಿಯ 337 ತ್ಯಾಜ್ಯವನ್ನು ವಿಲೇವಾರಿಗಾಗಿ ಈಗಾಗಲೇ ಪೀಥಂಪುರಕ್ಕೆ ತರಲಾಗಿದೆ. ಈ ಪೈಕಿ 10 ಟನ್ ತ್ಯಾಜ್ಯದ ದಹನ ಪ್ರಕ್ರಿಯೆ ಮುಕ್ತಾಯಗೊಂಡಿದೆ.
ಈ ಬಗ್ಗೆ ಮಾತನಾಡಿದ ಇಂದೋರ್ ವಿಭಾಗದ ಆಯುಕ್ತ ದೀಪಕ್ ಸಿಂಗ್ ಮೊದಲ ಹಂತದ ತ್ಯಾಜ್ಯ ದಹನ ಪ್ರಯೋಗದಲ್ಲಿ ಅನಿಲ ಹೊರಸೂಸುವಿಕೆಗೆ ಅನುಮತಿಸಲಾದ ಮಿತಿಯೊಳಗೆ ಇದೆ. ಮಾರ್ಚ್ 4 ರಂದು ಎರಡನೇ ಹಂತದ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದರು.