ಮನೆಗಳನ್ನೇ ಗುರಿಯಾಗಿಟ್ಟುಕೊಂಡು ರಾಕೆಟ್​ ಬಿಟ್ಟ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೀಪಾವಳಿ ಸಂಭ್ರಮದಲ್ಲಿ ಇಡೀ ದೇಶ ಖುಷಿಪಡುತ್ತಿದ್ದು, ಪಟಾಕಿಗಳನ್ನು ಹಚ್ಚಿ ಹಬ್ಬದಲ್ಲಿ ಮಿಂದೇಳುತ್ತಿದ್ದಾರೆ. ಅದೇ ರೀತಿ ಸಂಭ್ರಮದಲ್ಲಿ ಇಲ್ಲಿ ವ್ಯಕ್ತಿ ರಾಕೆಟ್​ಗಳನ್ನು ಅಪಾರ್ಟ್​ಮೆಂಟ್​ಗಳ ಕಡೆಗೆ ಗುರಿಯಿಟ್ಟು ಬಿಟ್ಟಿದ್ದಾನೆ.
ಈ ಕುರಿತ ವಿಡಿಯೋ ವೈರಲ್​ ಆಗಿದ್ದು, ಮಹಾರಾಷ್ಟ್ರದ ಥಾಣೆ ಪೊಲೀಸರು ಆ ವ್ಯಕ್ತಿಯ ಪತ್ತೆ ಕಾರ್ಯ ಶುರು ಮಾಡಿದ್ದಾರೆ.
ಮಹಾರಾಷ್ಟ್ರದ ಥಾನೆ ಬಳಿಯ ಉಲ್ಲಾಸನಗರದಲ್ಲಿ ಈ ನಡೆದ ಘಟನೆ ನಡೆದಿದ್ದು, ಈ ವಿಡಿಯೋವನ್ನು ಇನ್ಸ್​ಟಾಗ್ರಾಂನಲ್ಲಿ ಬಿಡಲಾಗಿತ್ತು.ಇಲ್ಲಿ ವ್ಯಕ್ತಿಯೊಬ್ಬ ಅಪಾರ್ಟ್​ಮೆಂಟ್​ ಬಳಿ ನಿಂತುಕೊಂಡು ಅನೇಕ ದೀಪಾವಳಿ ರಾಕೆಟ್​ಗಳನ್ನು ಮನೆಗಳ ಕಡೆಗೆ ಗುರಿ ಮಾಡಿ ಬಿಡುತ್ತಿರುವುದು ಕಂಡುಬಂದಿದೆ.
ಸದ್ಯಕ್ಕೆ ವ್ಯಕ್ತಿಯ ಬಂಧನ ಆಗದಿದ್ದರೂ ಐಪಿಸಿ ಸೆಕ್ಷನ್ 285, 286 ಮತ್ತು 336 ಅಡಿಯಲ್ಲಿ ದೂರು ದಾಖಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!