ಹೊಸದಿಗಂತ ವರದಿ, ಮೈಸೂರು:
ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ಕೊಯ್ದುಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತೊಂಡಾಳು ಗ್ರಾಮದಲ್ಲಿ ನಡೆದಿದೆ. ಗೋವಿಂದ ಶೆಟ್ಟಿ ಎಂಬುವರ ಮಗ ರಾಜಶೆಟ್ಟಿ ಎಂಬಾತ ತನ್ನ ಮರ್ಮಾಂಗವನ್ನ ಕೊಯ್ದುಕೊಂಡ ಕುಡುಕ. ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದ ರಾಜಶೆಟ್ಟಿ ಸಂಯಮವನ್ನ ಕಳೆದುಕೊಂಡಿದ್ದ. ಈ ವೇಳೆ ತನ್ನ ಮರ್ಮಾಂಗವನ್ನು ತಾನೆ ಕುಯ್ದುಕೊಂಡಿದ್ದಾನೆ.ಈತನ ಕೂಗಾಟ ಕೇಳಿದ ಗ್ರಾಮಸ್ಥರು ನೆರವಿಗೆ ಬಂದಿದ್ದಾರೆ.ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಜಶೆಟ್ಟಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.