ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡ ತನ್ನ ಎರಡನೇ ಖರೀದಿಯಾಗಿ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರೂ.ಗೆ ಖರೀದಿ ಮಾಡಿದೆ.
2009 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿಯೇ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ್ದ ಭುವನೇಶ್ವರ್, ಎರಡನೇ ಸೀಸನ್ ನಲ್ಲಿ ತಂಡದಲ್ಲಿದ್ದರೂ ಅವರಿಗೆ ಹೆಚ್ಚಾಗಿ ಆಡುವ ಅವಕಾಶ ಸಿಗಲಿಲ್ಲ.
2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಸೇರ್ಪಡೆಗೊಂಡ ಭುವನೇಶ್ವರ್ ಅವರ ಅದೃಷ್ಟ ಬದಲಾಯಿತು. ಸತತ ನಾಲ್ಕು ಸೀಸನ್ಗಳಲ್ಲಿ 18 ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದ್ದರು.
2016 ಮತ್ತು 2017 ರ ಸೀಸನ್ನ ಸತತ ಎರಡು ಆವೃತ್ತಿಗಳಲ್ಲಿ ಭುವಿ ಪರ್ಪಲ್ ಕ್ಯಾಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.