ಹೊಸದಿಗಂತ ಡಿಜಿಟಲ್ ಡೆಸ್ಕ್:
ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 75 ರನ್ಗಳಿಗೆ ಆಲೌಟಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಡೆಲ್ಲಿಗೆ ಮೊದಲ ಮೂರು ಓವರ್ಗಳಲ್ಲಿಯೇ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
ಭುವನೇಶ್ವರ್ ಬೌಲ್ ಗೆ ಸಾಹಿಲ್ ಪರಾಖ್ ಖಾತೆ ತೆರೆಯದೆ ಕ್ಲೀನ್ ಬೌಲ್ಡ್ ಆದರೆ, ಕೆಎಲ್ ರಾಹುಲ್ ಕೇವಲ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಸಮೀರ್ ರಿಜ್ವಿ ಖಾತೆ ತೆರೆಯದೆ ಪೆವಿಲಿಯನ್ ನತ್ತ ಸಾಗಿದರು. ಸ್ಟಬ್ಸ್ 5 ರನ್ ಬಾರಿಸಿ ಔಟಾದರೆ, ನಿತೀಶ್ ರಾಣಾ 1 ರನ್ ಗೆ ಕೈಕೊಟ್ಟರು. ನಾಯಕ ಅಕ್ಷರ್ ಪಟೇಲ್ಗೂ ಶೂನ್ಯಕ್ಕೆ ಔಟಾದರು. ಇದರ ಪರಿಣಾಮವಾಗಿ ಡೆಲ್ಲಿ ಪವರ್‌ಪ್ಲೇನಲ್ಲಿ ಕೇವಲ 13 ರನ್ ಬಾರಿಸಿ 6 ವಿಕೆಟ್ ಕಳೆದುಕೊಂಡಿತು. ಐಪಿಎಲ್ ಇತಿಹಾಸದ ಪವರ್ ಪ್ಲೇನಲ್ಲಿ ತಂಡವೊಂದು ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಬಳಿಕ ಬಂದ ಅಭಿಷೇಕ್ ಪೊರೆಲ್ 30 ರನ್ ಗಳಿಸಿ ಟಾಸ್ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಮಿಲ್ಲರ್, ಕೈಲ್ ಜೇಮ್ಸನ್ ತಂಡದ ಮೊತ್ತವನ್ನು 50 ರ ಗಡಿ ದಾಟಿಸಿದರು. ಅಂತಿಮವಾಗಿ ಡೆಲ್ಲಿ ಕಳಪೆ ಬ್ಯಾಟಿಂಗ್ ಮೂಲಕ 75 ರನ್ ಗೆ ಸರ್ವಪತನ ಕಂಡಿತು.



