ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಸಂಸ್ಥೆಯ ಮುಖ್ಯಸ್ಥ (ಪ್ರಧಾನ ಕಾರ್ಯದರ್ಶಿ) ಆಂಟೋನಿಯೊ ಗುಟೆರೆಸ್ ಗೆ ಇಸ್ರೇಲ್ ಭೇಟಿ ನೀಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇಸ್ರೇಲ್ ನ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಈ ಬಗ್ಗೆ ಮಾತನಾಡಿದ್ದು, ಇಸ್ರೇಲ್‌ಗೆ ಪ್ರವೇಶಿಸದಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ನಿರ್ಬಂಧ ವಿಧಿಸಲಾಗಿದ್ದು, ದೇಶದ ವಿರುದ್ಧ ಪಕ್ಷಪಾತ ಹೊಂದಿದ್ದಾರೆಂದು ಆರೋಪಿಸಿದ್ದಾರೆ.
ಆಂಟೋನಿಯೊ ಗುಟೆರೆಸ್ ಅವರನ್ನು ‘ಪರ್ಸನಾ ನಾನ್ ಗ್ರಾಟಾ’ (ಸ್ವೀಕಾರಾರ್ಹವಲ್ಲದ ವ್ಯಕ್ತಿ) ಎಂದು ಘೋಷಿಸಿದ್ದಾರೆ.
ಇಸ್ರೇಲ್‌ನ ಮೇಲೆ ಇರಾನ್‌ನ ಘೋರ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಲು ಸಾಧ್ಯವಾಗದ ಯಾರಾದರೂ, ಇಸ್ರೇಲ್ ನೆಲದಲ್ಲಿ ಕಾಲಿಡಲು ಅರ್ಹರಲ್ಲ ಎಂದು ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ಕೊಲೆಗಾರರು ನಡೆಸಿದ ಹತ್ಯಾಕಾಂಡ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಸೆಕ್ರೆಟರಿ ಜನರಲ್ ಇನ್ನೂ ಖಂಡಿಸಿಲ್ಲ ಅಥವಾ ಅವರನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಯಾವುದೇ ಪ್ರಯತ್ನಗಳನ್ನು ನಡೆಸಿಲ್ಲ. ಆಂಟ್ನಿಯೊ ಗುಟೆರೆಸ್ ಇಲ್ಲದೆಯೂ ಇಸ್ರೇಲ್ ತನ್ನ ನಾಗರಿಕರನ್ನು ರಕ್ಷಿಸಲು ಮತ್ತು ಅದರ ರಾಷ್ಟ್ರೀಯ ಘನತೆಯನ್ನು ಎತ್ತಿಹಿಡಿಯಲು ಮುಂದುವರಿಯುತ್ತದೆ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.