ಬೀದರ್:‌ ಅಕ್ರಮವಾಗಿ ಸಾಗಿಸುತ್ತಿದ್ದ 17 ಜಾನುವಾರುಗಳ ರಕ್ಷಣೆ, ಆರೋಪಿಗಳು ವಶಕ್ಕೆ

ಹೊಸದಿಗಂತ ವರದಿ, ಬೀದರ್
‌ಬೀದರ್ ಬ ಉದಗೀರನಿಂದ ಜಹೀರಾಬಾದ ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಎಮ್ಮೆಗಳು ಹಾಗೂ 7 ಎತ್ತುಗಳು ಸೇರಿದಂತೆ ಒಟ್ಟು 17 ಜಾನುವಾರುಗಳನ್ನು ಕಮಲನಗರ ಪೊಲೀಸರು ರಕ್ಷಿಸಿದ್ದಾರೆ.
ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸ್ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿದ್ದು, ಉದಗೀರ ಕಡೆಯಿಂದ ಬರುತ್ತಿದ್ದ ಟೆಂಪೋವನ್ನು ಪರಿಶೀಲಿಸಿದಾಗ ಎಮ್ಮೆ ಹಾಗೂ ಎತ್ತುಗಳು ಪತ್ತೆಯಾಗಿವೆ. ಆರೋಪಿಗಳ ಬಳಿ ಯಾವುದೇ ಪರವಾನಿಗೆಗಳು ಇರಲಿಲ್ಲ. ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಉದಗೀರ ಕಡೆಯಿಂದ ಜಹೀರಾಬಾದ್‍ಗೆ ಅನಧಿಕೃತವಾಗಿ ಸಾಗಣೆ ಮಾಡುತ್ತಿರುವುದು ತಿಳಿದುಬಂದಿದೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಾಗಿದೆ.
ಕಮಲನಗರ ಪೊಲೀಸ್ ಠಾಣೆಯ ಪಿಎಸ್‍ಐ ನಂದಿನಿ, ಪೊಲೀಸ ಸಿಬ್ಬಂದಿ ಗುರುನಾಥ, ವಸಂತ, ಪಶುವೈದ್ಯಾಧಿಕಾರಿ ಅನೀಲ ವಾಘಮಾರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!