ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೀದರ್ ಶಿವಾಜಿ ಚೌಕ್‌ನಲ್ಲಿರು ಬ್ಯಾಂಕ್‌ನಲ್ಲಿ ಹಣ ತುಂಬಿಸಿಕೊಂಡು ತೆರಳುತ್ತಿದ್ದ ಸಿಎಂಎಸ್ ಕಂಪನಿ ಸಿಬ್ಬಂದಿಗಳ ಮೇಲೆ ದರೋಡೆಕೋರರು ಗುಂಡಿನ ದಾಳಿ ಮಾಡಿ, ಹಣ ಎಗರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಇನ್ನು 93 ಲಕ್ಷ ರೂಪಾಯಿ ನಗದು ಕದ್ದು ಓಡುತ್ತಿದ್ದ ದುಷ್ಕರ್ಮಿಗಳು ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದಾರೆ. ಹಣದ ಬ್ಯಾಗ್ ನೋಡಿ ಅನುಮಾನಗೊಂಡ ಇವರನ್ನು ಪ್ರಶ್ನಿಸಿದಾಗ ಮತ್ತೆ ಫೈರಿಂಗ್ ಮಾಡಿ ಅಲ್ಲಿಂದಲೂ ಎಸ್ಕೇಪ್ ಆಗಿದ್ದಾರೆ.
ಹಣದ ಬಾಕ್ಸ್ ಸಮೇತ ಬೈಕ್‌ನಲ್ಲಿ ಪರಾರಿಯಾದ ದುಷ್ಕರ್ಮಿಗಳು ಬೀದರ್‌ನಿಂದ ಹೈದ್ರಾಬಾದ್ ಕಡೆ ತೆರಳಿದ್ದಾರೆ. ಖಾಸಗಿ ಟ್ರಾವೆಲ್ಸ್ ಬಸ್ ಹತ್ತಿದ ಇಬ್ಬರು ದುಷ್ಕರ್ಮಿಗಳನ್ನು ನೋಡಿದ ಟ್ರಾವೆಲ್ಸ್ ಸಿಬ್ಬಂದಿಗೆ ಅನುಮಾನ ಬಂದಿದೆ. ಕೂಡಲೇ ಟ್ರಾವೆಲ್ಸ್‌ನವರು ಬ್ಯಾಗ್ ಮಾಡಬೇಕು. ಬ್ಯಾಗ್ ತೋರಿಸಿ ಎಂದು ಪ್ರಶ್ನಿಸಿದ್ದಾರೆ.
ಬ್ಯಾಗ್ ತೋರಿಸಿ ಎಂದು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳು ಟ್ರಾವೆಲ್ಸ್ ಸಿಬ್ಬಂದಿಯ ಕಾಲು, ಹೊಟ್ಟೆಯ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಟ್ರಾವೆಲ್ಸ್ ಸಿಬ್ಬಂದಿಗೆ ಗುಂಡು ತಗುಲಿದ್ದು, ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದರೋಡೆಕೋರರು ಹತ್ತಿದ ಬಸ್‌ನಲ್ಲೇ ಇಬ್ಬರು ಬೀದರ್ ಪೊಲೀಸರು ಪ್ರಯಾಣ ನಡೆಸುತ್ತಿದ್ದರು. ವಾರೆಂಟ್ ಡ್ಯೂಟಿ ಮೇಲೆ ರಾಯ್‌ಪುರಕ್ಕೆ ತೆರಳುತ್ತಿದ್ದ ಇಬ್ಬರು ಬೀದರ್ ಪೊಲೀಸರು, ಫೈರಿಂಗ್ ಆಗುತ್ತಲೇ ಇಬ್ಬರು ದುಷ್ಕರ್ಮಿಗಳನ್ನ ಹಿಡಿಯಲು ಮುಂದಾಗಿದ್ದಾರೆ. ಆದರೆ ಇಬ್ಬರು ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.