October 18, 2026
Sunday, October 18, 2026
spot_img

ಬೀದರ್‌ನ ಯುವಕ ಹೀಟ್‌ ಸ್ಟ್ರೋಕ್‌ನಿಂದ ಮೃತಪಟ್ಟಿಲ್ಲ, ಕಾರಣ ಬೇರೆಯೇ ಇದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೀದರ್‌ ಜಿಲ್ಲೆಯಲ್ಲಿ 20 ವರ್ಷದ ಯುವಕ ಸಮೀರ್‌ ಮೃತಪಟ್ಟಿದ್ದು, ಬಿಸಿಲಿನಲ್ಲಿ ಓಡಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಹೀಟ್‌ನಿಂದ ಸ್ಟ್ರೋಕ್‌ ಆಗಿದೆ ಎಂದು ಹೇಳಲಾಗಿತ್ತು. ಆದರೆ ಸಾವಿಗೆ ಕಾರಣ ಈಗ ಹೊರಬಿದ್ದಿದೆ.

ಸಮೀರ್‌ ಹಾಗೂ ಬೆಳಗಾವಿಯ ವೆಂಕಟೇಶ್‌ ಸಾವಿಗೆ ಬಿಸಿಲು ಕಾರಣ ಎಂದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ನಂತರವೇ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಹೇಳಲಾಗಿತ್ತು.

ಇದೀಗ ಕಾರಣ ತಿಳಿದುಬಂದಿದೆ. ಬರೀ 20 ವರ್ಷದ ಯುವಕ ಸಮೀರ್‌ಗೆ ಕುಡಿಯುವ ಅಭ್ಯಾಸ ಅತಿಯಾಗಿದ್ದು, ಇದರಿಂದಾಗಿ ಅನರೋಗ್ಯದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಬೆಳಗಾವಿಯ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ವೆಂಕಟೇಶ್‌ಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ.

Must Read