ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಅಗ್ರಹಾರ ವೃತ್ತದ ಕುವೆಂಪುನಗರದ ಶಾಂತಿಸಾಗರ ಬಳಿ ಇಂದು ಭಾರತ್ ಅಕ್ಕಿ ವಿತರಣೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದ್ದಾರೆ.
ಬಳಿಕ ಅಕ್ಕಿ ಪಡೆಯಲು ಜನರು ಮುಗಿಬಿದ್ದಿದ್ದು, ಒಬ್ಬರ ಮೇಲೊಬ್ಬರು ಬೀಳುವುದು, ಅಕ್ಕಿಗಾಗಿ ನೂಕಾಟ ತಳ್ಳಾಟ ನಡೆದಿದೆ.
ಒಟ್ಟಾರೆ 10 ಕೆಜಿಯ ಅಕ್ಕಿ ಚೀಲವನ್ನು 290 ರೂಪಾಯಿ ಪಡೆದು ಜನರು ತೆಗೆದುಕೊಂಡಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ ಸರ್ಕಾರ ಅಕ್ಕಿ ನೀಡುತ್ತಿದ್ದು, ಖರೀದಿಗೆ ಜನ ಮುಗಿಬಿದ್ದಿದ್ದಾರೆ.