ಹೊಸದಿಗಂತ ಡಿಜಿಟಲ್ ಡೆಸ್ಕ್
ಇತರ ದೇಶಗಳೊಂದಿಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೊಂದಿರುವ ತಾಂತ್ರಿಕ ಸಂಬಂಧಗಳನ್ನು ʼಗಮನಿಸುವʼ ಅಗತ್ಯವಿದೆ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ತಮ್ಮ ಸರ್ಕಾರ ಮಸ್ಕ್ ವಿರುದ್ಧ ತಿರುಗಿ ಬಿದ್ದಿರುವ ಸೂಚನೆ ನೀಡಿದ್ದಾರೆ.
ಎಲೋನ್ ಮಸ್ಕ್ ಅವರು ʼಅಮೆರಿಕ ರಾಷ್ಟ್ರೀಯ ಭದ್ರತೆಗೆ ಬೆದರಿಕೆʼ ಎಂದು ಬಿಡೆನ್ ಆಡಳಿತ ಭಾವಿಸುತ್ತದೆಯೇ, ʼಟ್ವಿಟರ್‌ನ ಜಂಟಿ ಸ್ವಾಧೀನವನ್ನು ತನಿಖೆ ಮಾಡಬೇಕೇʼ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಡೆನ್, ʼಎಲಾನ್ ಮಸ್ಕ್ ಇತರ ದೇಶಗಳೊಂದಿಗೆ ಹೊಂದಿರುವ ತಾಂತ್ರಿಕ ಸಂಬಂಧಗಳು ತನಿಖೆಗೆ ಯೋಗ್ಯವೆಂದು ನಾನು ಭಾವಿಸುತ್ತೇನೆ. ಆ ಮೂಲಕ ಅವರು ಅನುಚಿತವಾದದ್ದನ್ನು ಮಾಡುತ್ತಿದ್ದಾರೋ ಇಲ್ಲವೋ ಎಂಬ ವಿಚಾರ ಬಯಲಾಗಿಲಿದೆʼ ಎಂದಿದ್ದಾರೆ.
ಸೋಮವಾರದ ಮಾತನಾಡಿದ್ದ ಟ್ವಿಟರ್ ಸಿಇಒ ಎಲೋನ್ ಮಸ್ಕ್, ಅವರು ಭವಿಷ್ಯದಲ್ಲಿ ಮತ್ತೊಮ್ಮೆ ʼಡೆಮೋಕ್ರಾಟ್ʼ ಪಕ್ಷಕ್ಕೆ ಮತ ಹಾಕುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದು ಬಿಡೆನ್ ರನ್ನು ಕೆರಳಿಸಿದೆ ಎಂದು ಹೇಳಲಾಗುತ್ತಿದೆ.
ಗಮನಾರ್ಹವಾಗಿ, ರಿಪಬ್ಲಿಕನ್ ಕಾಂಗ್ರೆಸ್‌ಗೆ ತನ್ನ ಬೆಂಬಲವನ್ನು ಬಹಿರಂಗವಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಮಸ್ಕ್ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಅಮೆರಿಕಾದಲ್ಲಿ ಈಗಾಗಲೇ ಚುನಾವಣೆ ಬಿಸಿ ಹೆಚ್ಚುತ್ತಿದೆ. ಅಧಿಕಾರಕ್ಕಾಗಿ ಡೆಮಾಕ್ರಾಟಿಕ್, ರಿಪಬ್ಲಿಕನ್ ಪಕ್ಷಗಳು ತುರುಸಿನ ಸಿದ್ಧತೆಯಲ್ಲಿ ತೊಡಗಿವೆ. ರಾಜಕೀಯವಾಗಿ ವಿವಿಧ ವ್ಯೂಹಗಳನ್ನು ರೂಪಿಸಲಾಗುತ್ತಿದೆ. ಈ ಹಂತದಲ್ಲಿ ಮಸ್ಕ್ ಎದುರಾಳಿಗಳ ಪರ ನಿಂತಿದ್ದು ಬಿಡೆನ್ ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ