ಕೋಟು ಧರಿಸಲು ಒದ್ದಾಡಿದ ಅಮೆರಿಕಾ ಅಧ್ಯಕ್ಷ ಬಿಡೆನ್: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರೋನಾದಿಂದಾಗಿ ಎರಡು ವಾರಗಳ ಹೋಂ ಕ್ವಾರಂಟೈನ್‌ನಲ್ಲಿ ಕಳೆದ ನಂತರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ ವೇಳೆ ಕೋಟು ಹಾಕಿಕೊಳ್ಳಲಾಗದೆ ಒದ್ದಾಡಿರುವ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಉತ್ತೇಜನ ನೀಡಿದ್ದಲ್ಲದೆ ಹಲವು ಭರವಸೆಗಳನ್ನೂ ನೀಡಿದರು. ಎಲ್ಲರ ಕಾಳಜಿ ವಹಿಸಲಾಗುವುದು ಎಂದು ಆಶಾಭಾವನೆ ಮೂಡಿಸಿದರು.

ಭೇಟಿ ಬಳಿಕ ಕೆಂಟುಕಿ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್‌ನಿಂದ ಕೆಳಗಿಳಿದಾಗ ಬಿಡೆನ್ ಕೋಟ್‌ ಹಾಕಿಕೊಳ್ಳಲು ಶತ ಪ್ರಯತ್ನಿಸಿದರು. ಜೋರಾದ ಗಾಳಿಯಿಂದಾಗಿ ಕೋಟ್ ನ ಒಂದು ತೋಳು ಹಾರಾಡುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ ಕೈಗೆ ಸಿಗದೆ ಬಿಡೆನ್‌ ಸವರನ್ನು ಕೆಲ ಕ್ಷಣ ಆಟವಾಡಿಸಿತು. ಬಳಿಕ ತಮ್ಮ ಪತ್ನಿಯ ಸಹಾಯದಿಂದ ಕೋಟ್‌ ಹಾಕಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!