September 14, 2026
Monday, September 14, 2026
spot_img

ಈ ಬಾರಿ ಚೆನ್ನೈನಲ್ಲಿ ಬಿಗ್ ಬ್ಯಾಷ್ ಲೀಗ್ ಉದ್ಘಾಟನಾ ಪಂದ್ಯ : ಆಸೀಸ್‌ ಪ್ರಧಾನಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್‌ ಹಾಗೂ ರಾಜತಾಂತ್ರಿಕ ಬಾಂಧವ್ಯದಲ್ಲಿ ಮತ್ತೊಂದು ಹೊಸ ಅಧ್ಯಾಯ ಆರಂಭವಾಗಿದೆ. ಆಸ್ಟ್ರೇಲಿಯಾದ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಗಡಿ ದಾಟುತ್ತಿದೆ.

2026-27ರ ಭವ್ಯ ಉದ್ಘಾಟನಾ ಪಂದ್ಯ ಈ ಬಾರಿ ಭಾರತದಲ್ಲಿ ನಡೆಯಲಿದೆ. ಹೌದು, ಚೆನ್ನೈನಲ್ಲಿ ಈ ಪಂದ್ಯಕ್ಕೆ ಆತಿಥ್ಯ ವಹಿಸಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೂರು ದಿನಗಳ ಆಸ್ಟ್ರೇಲಿಯಾ ಭೇಟಿಯ ಕೊನೆಯ ದಿನದಂದು ಆಸೀಸ್ ಪ್ರಧಾನಿ ಆಂಥೋನಿ ಅಲ್ಬನೀಸ್ ಜತೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ಬನೀಸ್, ಬರುವ ಡಿಸೆಂಬರ್‌ನಲ್ಲಿ ಬಿಗ್ ಬ್ಯಾಷ್ ಲೀಗ್‌ನ ಉದ್ಘಾಟನಾ ಪಂದ್ಯ ಭಾರತದ ಚೆನ್ನೈನಲ್ಲಿ ನಡೆಯಲಿದೆ. ಇದು ಎರಡೂ ದೇಶಗಳ ನಡುವೆ ವಿಸ್ತರಿಸುತ್ತಿರುವ ಕ್ರೀಡಾ ಸಂಬಂಧದ ಸಂಕೇತವಾಗಿದೆ ಎಂದು ಹೆಮ್ಮೆಯಿಂದ ಪ್ರಕಟಿಸಿದರು.

ವಿಶ್ವದ ಪ್ರಮುಖ ಮತ್ತು ಅತ್ಯಂತ ಯಶಸ್ವಿ ಫ್ರಾಂಚೈಸಿ ಟಿ20 ಕ್ರಿಕೆಟ್ ಸ್ಪರ್ಧೆಗಳಲ್ಲಿ ಒಂದಾದ ಬಿಬಿಎಲ್, ಆಸ್ಟ್ರೇಲಿಯಾದ ಹೊರಗೆ ಅಧಿಕೃತ ಪಂದ್ಯವನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಭಾರತದ ಐಪಿಎಲ್ ಪಂದ್ಯಗಳು ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿದ್ದವು. ಆದರೆ, ವಿದೇಶಿ ಪ್ರೀಮಿಯರ್ ಲೀಗ್‌ವೊಂದು ಭಾರತದ ಮಣ್ಣಿನಲ್ಲಿ ಅಧಿಕೃತವಾಗಿ ಪಂದ್ಯವನ್ನು ಆಡುತ್ತಿರುವುದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಮೊದಲ ಘಟನೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !