ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಸಾಮಾನ್ಯವಾಗಿ ಸಖತ್ ಖಡಕ್, ಇಲ್ಲ ತಮಾಷೆ ಮಾಡುತ್ತಾ ಕಾಣಿಸಿಕೊಳ್ಳುತ್ತಾರೆ. ಆದರೆ ಇಂದು ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಕಣ್ಣೀರು ಹಾಕಿದ್ದಾರೆ.
ಅಕ್ಟೋಬರ್ 19ರಂದು ಬಿಗ್ಬಾಸ್ ಶೋ ನಡೆಸಿಕೊಡುವಾಗಲೇ ತಾಯಿಯ ಅನಾರೋಗ್ಯದ ಸುದ್ದಿ ತಿಳಿದು ಅರ್ಧಕ್ಕೆ ಶೋ ನಿಲ್ಲಿಸಿ ಹೋಗಿದ್ದ ಸುದೀಪ್ ಒಂದು ವಾರದ ಗ್ಯಾಪ್ ಬಳಿಕ ವೇದಿಕೆ ಮೇಲೆ ವಾಪಸ್ಸಾಗಿದ್ದಾರೆ.
ಸುದೀಪ್ ಅವರ ತಾಯಿಗೆ ಬಿಗ್ಬಾಸ್ ಸಹ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಭಾವುಕರಾಗಿದ್ದಾರೆ.
ಬಿಗ್ಬಾಸ್ ಸ್ಪರ್ಧಿ, ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ವೇದಿಕೆಗೆ ಬಂದು ಪರಪಂಚ ನೀನೆ ಹಾಡುವ ಮೂಲಕ ಎಲ್ಸಿಡಿಯಲ್ಲಿ ಸುದೀಪ್ ತಾಯಿಯವರ ಚಿತ್ರ ಮೂಡಿತು, ಬಿಗ್ಬಾಸ್ ಸ್ಪರ್ಧಿಗಳು ಸಹ ಎಲ್ಲರೂ ಎದ್ದು ನಿಂತು ಸುದೀಪ್ ತಾಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.