ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಭಾಗಲ್ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿರುವ ಘಟನೆ ನಡೆದಿದೆ. ಗಂಗಾನದಿಗೆ ಅಡ್ಡಲಾಗಿ ಆಗುವನಿ-ಸುಲ್ತಂಗಂಜ್ ನಡುವೆ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿದಿದೆ.
ಸೇತುವೆಯ 500 ಮೀಟರ್ ಭಾಗವು ಇದ್ದಕ್ಕಿದ್ದಂತೆ ನದಿಗೆ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಸಿಎಂ ನಿತೀಶ್ ಕುಮಾರ್ ಅವರು 23 ಫೆಬ್ರವರಿ 2014 ರಂದು ಸೇತುವೆಯ ಶಂಕುಸ್ಥಾಪನೆ ಮಾಡಿದ್ದರು. ಬಿಹಾರ ಸರ್ಕಾರದ ಈ ಯೋಜನೆಯನ್ನು ಅತ್ಯಂತ ಮಹತ್ವಾಕಾಂಕ್ಷೆ ಯೋಜನೆ ಎಂದು ಪರಿಗಣಿಸಲಾಗಿತ್ತು.ಈ ಯೋಜನೆಯ ವೆಚ್ಚದ ಆರಂಭಿಕ ಮೌಲ್ಯಮಾಪನ 1710.77 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.