ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ನಿರ್ಮಿತ ವಾಹನಗಳ ಮೇಲೆ ಭಾರಿ ತೆರಿಗೆ ವಿಧಿಸುವ ಘೋಷಣೆ ಮಾಡಿದ್ದಾರೆ. ಈ ಮೂಲಕ ಜನರಿಗೆ ದೊಡ್ಡ ಆಘಾತ ನೀಡಿದ್ದಾರೆ.
ವೈಟ್ ಹೌಸ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಲ್ಲಾ ವಿದೇಶಿ ನಿರ್ಮಿತ ಕಾರುಗಳ ಮೇಲೆ 25 ಪ್ರತಿಶತ ತೆರಿಗೆ ವಿಧಿಸಲು ನಿರ್ಧರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಕಾರುಗಳು ಅಮೆರಿಕದಲ್ಲಿ ತಯಾರಿಸಲ್ಪಟ್ಟಿದ್ದರೆ, ಅವುಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಈ ನಿಯಮ ಏಪ್ರಿಲ್ 2 ರಿಂದ ಜಾರಿಗೆ ಬರಲಿದ್ದು, ವಿದೇಶಿ ನಿರ್ಮಿತ ಕಾರುಗಳು ಮತ್ತು ಲಘು ಟ್ರಕ್‌ಗಳ ಮೇಲೆ ಈಗಿರುವ ತೆರಿಗೆಯ ಜೊತೆಗೆ ಅನ್ವಯವಾಗುತ್ತದೆ.