Thursday, August 18, 2022

Latest Posts

ಡ್ರ್ಯಾಗನ್‌ಗೆ ದೊಡ್ಡಣ್ಣನ ಸೆಡ್ಡು: ಎಚ್ಚರಿಕೆಗೆ ಸೊಪ್ಪುಹಾಕದೆ ತೈವಾನ್‌ಗೆ ಕಾಲಿಟ್ಟ ನ್ಯಾನ್ಸಿ ಪೆಲೋಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಎಚ್ಚರಿಕೆಯನ್ನೂ ಲೆಕ್ಕಿಸದೆ ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ರಾತ್ರಿ ತೈವಾನಿಗೆ ಕಾಲಿರಿಸಿದ್ದು, ಡ್ರ್ಯಾಗನ್ ಧಮ್ಕಿಗೆ ಸೆಡ್ಡುಹೊಡೆದಿದ್ದಾರೆ.
ಈ ಮೂಲಕ ಕಳೆದ 25  ವರ್ಷಗಳ ಬಳಿಕ ತೈವಾನ್‌ಗೆ ಭೇಟಿ ನೀಡುತ್ತಿರುವ ಅಮೆರಿಕದ ಉನ್ನತ ಮಟ್ಟದ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ನ್ಯಾನ್ಸಿ ಪೆಲೋಸಿ ಅವರಿದ್ದ ಅಮೆರಿಕ ಸರಕಾರದ ವಿಶೇಷ ವಿಮಾನಕ್ಕೆ ದಾರಿಯುದ್ದಕ್ಕೂ ತೈವಾನ್ ವಾಯುಪಡೆಯ ಯುದ್ಧ ವಿಮಾನಗಳು ಬೆಂಗಾವಲಾಗಿದ್ದುದು ವಿಶೇಷವಾಗಿತ್ತು.
ತೈವಾನ್ ಬೆಂಬಲಿಸಿ ಅಮೆರಿಕದ ಅನೇಕ ಅಧಿಕಾರಿಗಳು ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದಾರೆ. ಆದರೆ ಪೆಲೋಸಿ ಅವರ ಭೇಟಿಯು ಉನ್ನತ ಪ್ರತಿನಿಧಿ ಪ್ರವಾಸವಾಗಿ ಮಹತ್ವ ಪಡೆದುಕೊಂಡಿದೆ.
ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ತೈವಾನ್ ವಿಚಾರದಲ್ಲಿ ನೀವು ಬೆಂಕಿ ಜತೆ ಸರಸವಾಡುತ್ತಿದ್ದೀರಿ ಎಂಬ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಿಗೇ ನಡೆದ ಹೊಸ ಬೆಳವಣಿಗೆ ಅಮೆರಿಕಾ ಚೀನಾ ನಡುವೆ ಇನ್ನಷ್ಟು ಉದ್ವಿಗ್ನ ಸ್ಥಿತಿ ನಿರ್ಮಿಸಿದೆ.
ಅಮೆರಿಕದ ವಿಮಾನ ತೈವಾನ್ ವಾಯು ವಲಯ ಪ್ರವೇಶಕ್ಕೂ ಮುನ್ನ ಜಪಾನ್ ವಾಯುನೆಲೆಯಿಂದ ಅಮೆರಿಕ ವಾಯುಪಡೆಯ ಕನಿಷ್ಠ ೧೩ ವಿಮಾನಗಳು ರಕ್ಷಣಾ ಹಾರಾಟ ಆರಂಭಿಸಿದ್ದವು. ಪೆಲೋಸಿ ಭೇಟಿಯ ಸಂದರ್ಭದಲ್ಲಿಯೇ ತೈವಾನ್ ಜಲಸಂಧಿಯ ಸಮೀಪ ಚೀನಾದದ ಯುದ್ಧ ವಿಮಾನಗಳೂ ಹಾರಾಟ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, ಚೀನಾ ತನ್ನ ಭೌಗೋಳಿಕ ಸಮಗ್ರತೆಯ ರಕ್ಷಣೆಗಾಗಿ ಎಲ್ಲ ಅಗತ್ಯ ಕ್ರಮ ವಹಿಸಲಿದೆ. ಮುಂದಿನ ಎಲ್ಲಾ ಪರಿಣಾಮಗಳಿಗೂ ಅಮೆರಿಕ, ತೈವಾನ್ ಪ್ರತ್ಯೇಕತಾ ಪಡೆಗಳು ಹೊಣೆಯಾಗಿರುತ್ತವೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!