September 13, 2026
Sunday, September 13, 2026
spot_img

ಅದಾನಿ ಗ್ರೂಪ್‌ನಿಂದ ಬಿಗ್ ಡೀಲ್: ವಿಳಿಂಜಂ ಪೋರ್ಟ್‌ನ ಶೇ. 49 ಪಾಲು ಎಂಎಸ್‌ಸಿಗೆ ಮಾರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ ‘ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್’ (APSEZ), ಕೇರಳದ ವಿಳಿಂಜಂನಲ್ಲಿರುವ ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಬಂದರಿನ ತನ್ನ ಶೇ. 49ರಷ್ಟು ಪಾಲನ್ನು ಮಾರಾಟ ಮಾಡಲು ಮುಂದಾಗಿದೆ. ವಿಶ್ವದ ನಂಬರ್ ಒನ್ ಶಿಪ್ಪಿಂಗ್ ಕಂಪನಿಯಾದ ಮೆಡಿಟರೇನಿಯನ್ ಶಿಪ್ಪಿಂಗ್‌ನ (MSC) ಅಂಗಸಂಸ್ಥೆ ‘ಟರ್ಮಿನಲ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್’ ಈ ಪಾಲನ್ನು ಸುಮಾರು 1.4 ಬಿಲಿಯನ್ ಡಾಲರ್ (ಅಂದಾಜು 13,000 ಕೋಟಿ ರೂ.) ಒಪ್ಪಂದದಲ್ಲಿ ಖರೀದಿಸುತ್ತಿದೆ.

ಹಂತ-ಹಂತವಾಗಿ ಹಣ ಪಾವತಿ
ಸ್ವಿಟ್ಜರ್‌ಲ್ಯಾಂಡ್ ಮೂಲದ ಈ ಸಂಸ್ಥೆಯು ಮೊದಲ ಹಂತದಲ್ಲಿ 539 ಮಿಲಿಯನ್ ಡಾಲರ್ ಪಾವತಿಸಲಿದೆ. ನಂತರ, 2028ರ ಡಿಸೆಂಬರ್ ವೇಳೆಗೆ ಉಳಿದ 858 ಮಿಲಿಯನ್ ಡಾಲರ್ ನೀಡಲಿದ್ದು, ಈ ಮೊತ್ತವನ್ನು ಬಂದರಿನ ಸಾಮರ್ಥ್ಯ ವಿಸ್ತರಣೆಯ 1.75 ಬಿಲಿಯನ್ ಡಾಲರ್ ಯೋಜನೆಗೆ ಬಳಸಲಾಗುತ್ತದೆ.

ಬಂದರು ಸಾಮರ್ಥ್ಯ ವಿಸ್ತರಣೆ
ಪ್ರಸ್ತುತ 1.6 ಮಿಲಿಯನ್ ಸ್ಟ್ಯಾಂಡರ್ಡ್ ಕಂಟೈನರ್‌ಗಳ ಸಾಮರ್ಥ್ಯ ಹೊಂದಿರುವ ಈ ಬಂದರನ್ನು ವಿಸ್ತರಣೆಯ ನಂತರ 4.1 ಮಿಲಿಯನ್‌ಗೆ ಏರಿಸುವ ಗುರಿ ಇದೆ. ಭವಿಷ್ಯದಲ್ಲಿ ಇದನ್ನು 5.7 ಮಿಲಿಯನ್‌ಗೆ ಹೆಚ್ಚಿಸುವ ಯೋಜನೆಯೂ ಇದೆ.

ನಿಯಂತ್ರಣ ಯಾರ ಕೈಯಲ್ಲಿ?
ಪ್ರಸ್ತುತ ಈ ಬಂದರಿನಲ್ಲಿ ನೂರಕ್ಕೆ ನೂರರಷ್ಟು ಪಾಲು ಹೊಂದಿರುವ ಅದಾನಿ ಗ್ರೂಪ್, ಶೇ. 49 ಪಾಲನ್ನು ಎಂಎಸ್‌ಸಿಗೆ ನೀಡಿದರೂ, ಉಳಿದ ಶೇ. 51ರಷ್ಟು ಪ್ರಮುಖ ಪಾಲನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದ್ದು, ಬಂದರಿನ ನಿಯಂತ್ರಣ ಅದಾನಿ ಸಂಸ್ಥೆಯ ಬಳಿಯೇ ಇರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !