Thursday, October 6, 2022

Latest Posts

ಶಿಕ್ಷಕರ ದಿನಾಚರಣೆಗೆ ಭರ್ಜರಿ ಗಿಫ್ಟ್: 14,500 ಶಾಲೆಗಳ ಉನ್ನತೀಕರಣದ ಘೋಷಣೆ ಮಾಡಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶಾದ್ಯಂತ ಇಂದು ಶಿಕ್ಷಕರ ದಿನಾಚರಣೆ. ಈ ಶುಭ ದಿನ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ರೈಸಿಂಗ್ ಇಂಡಿಯಾ(PM-SHRI) ಯೋಜನೆಯಡಿ ದೇಶದ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ ಮಾಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿ ಸಂತಸ ಹಂಚಿಕೊಂಡಿದ್ದಾರೆ. ಶಿಕ್ಷಕರ ದಿನಾಚರಣೆ ಈ ದಿನ ಘೋಷಣೆ ಮಾಡಲು ಸಂತೋಷ ಪಡುತ್ತಿದ್ದೇನೆ. ಪ್ರಧಾನಿ ಮಂತ್ರಿ ರೈಸಿಂಗ್ ಇಂಡಿಯಾ ಯೋಡನೆ ಅಡಿಯಲ್ಲಿ ಭಾರತದ 14,500 ಶಾಲೆಗಳ ಅಭಿವೃದ್ಧಿ ಹಾಗೂ ಉನ್ನತೀಕರಣ ಮಾಡಲಾಗುತ್ತಿದೆ. ಈ ಶಾಲೆಗಳು ಸಂಪೂರ್ಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ PM-SHRI ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿರುವ ಶಾಲೆಗಳು ಹೇಗಿರಲಿದೆ ಅನ್ನೋ ಮಾಹಿತಿಯನ್ನು ನೀಡಿದ್ದಾರೆ. ಶಾಲೆಯ ಶಿಕ್ಷಣಗಳು ಆಧುನಿಕತೆ ಪಡೆದುಕೊಳ್ಳಲಿದೆ. ಆಧುನಿಕ, ಪರಿವರ್ತನೆಯ ಹಾಗೂ ಸಮಗ್ರ ವಿಧಾನವನ್ನು ಉನ್ನತೀಕರಿಸಿದ ಶಾಲೆಗಳು ಹೊಂದಿರಲಿದೆ. ಆವಿಷ್ಕಾರ ಆಧಾರಿತ ಭೋದನೆ ಮಾರ್ಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ತಂತ್ರಜ್ಞಾನ, ಸ್ಮಾರ್ಟ್ ಕ್ಲಾಸ್‌ರೂಮ್, ಕ್ರೀಡೆ ಸೇರಿದಂತೆ ಹಲವು ಮಜಲುಗಳ ಪಠ್ಯ ಹಾಗೂ ಪಠ್ಯೇತರ ಚುಟುವಟಿಕೆ, ತರಬೇತಿಗಳನ್ನು ಈ ಶಾಲೆಗಳನ್ನು ನೀಡಲಾಗುತ್ತದೆ. ಪ್ರಮುಖವಾಗಿ ಆಧುನಿಕ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ(NEP) ಭಾರತದ ಶಿಕ್ಷಣ ಕ್ಷೇತ್ರನ್ನು ಪರಿವರ್ತಿಸಿದೆ. ಇದೀಗ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣದಿಂದ ದೇಶದ ಲಕ್ಷಾನುಗಟ್ಟಲೆ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!