ಹೊಸದಿಗಂತ ವರದಿ ಚಿತ್ರದುರ್ಗ:
ಕೇವಲ 60 ದಿನಗಳಲ್ಲಿ ಹಣ ಡಬ್ಬಲ್ ಮಾಡಿಕೊಡುವುದಾಗಿ ನಂಬಿಸಿ ಜಿಲ್ಲೆಯ 107 ಜನರಿಂದ 4.79 ಕೋಟಿ ರೂ. ಸಂಗ್ರಹಿಸಿ ಪರಾರಿಯಾಗಿದ್ದ ಆರೋಪಿಯನ್ನು ಚಿತ್ರದುರ್ಗ ಸೈಬರ್ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ನಗರದ ಕೋಡೆ ರಮಣಯ್ಯ ಬಂಧಿತ ಆರೋಪಿಯಾಗಿದ್ದು, ವಂಚನೆ ಪ್ರಕರಣದ ಬಳಿಕ ದೇಶವನ್ನೇ ತೊರೆದು ವಿಯೆಟ್ನಾಂ ಸೇರಿಕೊಂಡಿದ್ದ. ಚಿತ್ರದುರ್ಗದ ಸೈಬರ್ ಠಾಣೆ ಪೊಲೀಸರು, ಭಾರತ ಸರ್ಕಾರದ ಬ್ಯೂರೋ ಆಫ್ ಇಮಿಗ್ರೇಶನ್(Bureay of Immigration, Government of India) ವಿಭಾಗದ ನೆರವಿನೊಂದಿಗೆ ಲುಕ್ಔಟ್ ನೋಟೀಸ್ ಹೊರಡಿಸಿದ್ದರು. 2024 ಜೂನ್ 8 ರಂದು ಆರೋಪಿ ಕೋಡೆ ರಮಣಯ್ಯ ಕೊಲ್ಕತ್ತಾದ ಧಮ್ ಧಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ. ತಕ್ಷಣ ವಿಮಾನ ನಿಲ್ದಾಣ ಪ್ರಾಧಿಕಾರದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕೋಲ್ಕತ್ತಾದ ನೇತಾಜಿ ಸುಭಾಷ್ಚಂದ್ರಭೋಸ್ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
107 ಜನರಿಗೆ 4.80 ಕೋಟಿ ವಂಚನೆ ಹೇಗೆ ಗೊತ್ತಾ..?
2023 ಡಿಸೆಂಬರ್ನಿಂದ ಸುಮಾರು 9 ತಿಂಗಳ ಹಿಂದೆ ಚಿಕ್ಕಜಾಜೂರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಪಿ.ವಿ.ಶೇಷಯ್ಯ ಹಾಗೂ ಎಂ.ಏಳುಕುಂಡಲು ಅವರ ಮೂಲಕ ಮಾಹಿತಿ ಪಡೆದುಕೊಂಡು ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಕೋಡೆ ರಮಣಯ್ಯ ಎಂಬುವವರ ಕ್ರೌಡ್ ಕ್ಲಬ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ 60 ದಿನಗಳಲ್ಲಿ ಡಬಲ್ ಆಗುತ್ತದೆ ಎಂದು ಮಾಹಿತಿ ನೀಡಿದ್ದು, ಅದರಂತೆ ಚಿಕ್ಕಜಾಜೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸದುರ್ಗ ತಾಲೂಕು ಬಾಗೂರು ಮೂಲದ ರಮೇಶಪ್ಪ ತಮ್ಮ ಸ್ನೇಹಿತ ರವೀಂದ್ರ ಹೆಸರಿನಲ್ಲಿ 1.4 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.
2 ತಿಂಗಳ ನಂತರ ರಮೇಶಪ್ಪನಿಗೆ 1.96 ಲಕ್ಷ ರೂ.ಗಳನ್ನು ಹಣ ಪಾವತಿಯಾಗಿದೆ. ಇದರಿಂದ ನಂಬಿಕೆ ಬಂದು ಮತ್ತೆ ಇದೇ ಕ್ರೌಡ್ ಕ್ಲಬ್ ಕಂಪನಿಗೆ 1.4 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದ ಇತರೆ ಸಿಬ್ಬಂದಿ, ಸಂಬಂಧಿರು, ಸ್ನೇಹಿತರು ಸೇರಿ ಒಟ್ಟು 106 ಮಂದಿ ವಿವಿಧ ಬ್ಯಾಂಕುಗಳ ಮೂಲಕ ಒಟ್ಟು 4,79,99,000 (4 ಕೋಟಿ 79 ಲಕ್ಷ 99 ಸಾವಿರ) ರೂ.ಗಳನ್ನು ಈ ಕಂಪನಿಯ ಖಾತೆಗೆ ವಿವಿಧ ಬ್ಯಾಂಕುಗಳಿಂದ ಹೂಡಿಕೆ ಮಾಡಿದ್ದರು.
ಕ್ರೌಡ್ ಕ್ಲಬ್ ಕಂಪನಿಯ ಮಾಲಿಕ ಕೋಡೆ ರಮಣಯ್ಯ ಹೂಡಿಕೆದಾರರ ಜೊತೆ ಮಾಡಿಕೊಂಡ ಅಗ್ರಿಮೆಂಟ್ ಪ್ರಕಾರ ಎರಡು ತಿಂಗಳು ಕಳೆದ ನಂತರ ಹಣ ಹಿಂದಿರುಗಿಸಿಲ್ಲ. ಅವರು ಕೊಟ್ಟಿದ್ದ ಎಲ್ಲ ನಂಬರ್ಗಳಿಗೆ ಪೋನ್ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ವಾಟ್ಸಪ್ ಮೆಸೇಜ್ ಕಳಿಸಿದರೂ ಉತ್ತರಿಸಿರಲಿಲ್ಲ