Tuesday, June 28, 2022

Latest Posts

BIG NEWS | ಭಯೋತ್ಪಾದಕರ ಗುಂಡಿನ ದಾಳಿಗೆ ಪೊಲೀಸ್ ಬಲಿ: 7 ವರ್ಷದ ಪುತ್ರಿಗೆ ಗಾಯ

ಹೊಸದಿಗಂತ ಜಿಜಿಟಲ್‌ ಡೆಸ್ಕ್‌:

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ.ಈ ವೇಳೆ ಗುಂಡಿನ ದಾಳಿಯಲ್ಲಿ ಅವರ 7 ವರ್ಷದ ಮಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಗರದ ಸೌರಾ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಮೃತಪಟ್ಟ ಪೊಲೀಸ್ ನನ್ನು ಶ್ರೀನಗರದ ಸೌರಾ ಪ್ರದೇಶದ ಸೈಫುಲ್ಲಾ ಖಾದ್ರಿ ಎಂದು ಗುರುತಿಸಲಾಗಿದೆ.
ಭಯೋತ್ಪಾದಕರು ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ನಂತರ ಪೋಲೀಸ್ ಸೈಫುಲ್ಲಾ ಖಾದ್ರಿ ಮತ್ತು ಅವರ ಮಗಳನ್ನು SKIMS ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಸೈಫುಲ್ಲಾ ಸಾವನ್ನಪ್ಪಿದ್ದಾರೆ.
ಭಯೋತ್ಪಾದಕರನ್ನು ಸೆರೆಹಿಡಿಯಲು ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss