BIG NEWS | ಉಕ್ರೇನ್​ನಲ್ಲಿ ಭಾರತದ ಮತ್ತೊರ್ವ ವಿದ್ಯಾರ್ಥಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

(ಮೂಲ ವರದಿಯನ್ನು ಅಪ್ಡೇಟ್ ಮಾಡಲಾಗಿದೆ)

ಚಂದನ್ ಸಾವು ಯುದ್ಧದ ಕಾರಣದಿಂದಲ್ಲ, ಆರೋಗ್ಯಕಾರಣದಿಂದ ಹಾಗೂ ಅವರ ಕುಟುಂಬ ಸದಸ್ಯರೂ ಉಕ್ರೇನಿನಲ್ಲಿದ್ದಾರೆ ಎಂದು ಭಾರತದ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಯುದ್ದಪೀಡಿತ ಉಕ್ರೇನ್​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪಂಜಾಬ್‌ ಮೂಲದ ಯುವಕ ಚಂದನ್ ಇಂದು ಪಾರ್ಶ್ವವಾಯುನಿಂದ ಮೃತಪಟ್ಟಿದ್ದಾನೆ.
ಚಂದನ್ ಜಿಂದಾಲ್ (22) ಉಕ್ರೇನ್​​ನಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್​ ಮಾಡುತ್ತಿದ್ದನು . ಚಂದನ್​​
ಇಸ್ಕೆಮಿಕ್ ಸ್ಟ್ರೋಕ್ ನಿಂದ (ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಸ್ಟ್ರೋಕ್​) ಬಳಲುತ್ತಿದ್ದನು.
ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದು, ವಿನ್ನಿಟ್ಸಿಯಾದ ತುರ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆದೆ.
ಇನ್ನು ಅಂತಿಮ ಸಂಸ್ಕಾರಕ್ಕಾಗಿ ಮಗನ ಮೃತದೇಹವನ್ನ ತರಸಿ ಕೊಡುವಂತೆ ಮೃತ ಚಂದನ್‌ ತಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!