BIG NEWS | ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ನಾಯಕ ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ, ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಬಂಧಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವಾರಂಟ್ ಹೊರಡಿಸಿದೆ.

ಯುದ್ಧ ಅಪರಾಧ, ಮಾನವ ಹಕ್ಕುಗಳ ಉಲ್ಲಂಘಟನೆ, ಅಮಾಯಕರ ಮೇಲೆ ಬಾಂಬ್, ಮಿಸೈಲ್ ದಾಳಿ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ನೆತನ್ಯಾಹು ವಿರುದ್ದ ಅರೆಸ್ಟ್ ವಾರೆಂಟ್ ನೀಡಿದೆ. ಇದೇ ವೇಳೆ ಹಮಾಸ್ ಉಗ್ರಸಂಘಟನೆ ಮುಖ್ಯಸ್ಥ ಮೊಹಮ್ಮದ್ ದಿಯಾಬ್ ಇಬ್ಬಾಹಿಂ, ಇಸ್ರೇಲ್ ಸೇನೆಯ ಮಾಜಿ ಸಚಿವ ಯೋಆವ್ ಗ್ಯಾಲೆಂಟ್ ವಿರುದ್ಧವೂ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ಉದ್ದೇಶಪೂರ್ವಕ ಹಾಗೂ ಪೂರ್ವನಿಗದಿ ದಾಳಿಗೆ ಹಮಾಸ್ ನಾಯಕನ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ.

ಇನ್ನು ನೇತನ್ಯಾಹೂ ಹಾಗೂ ಮಾಜಿ ರಕ್ಷಣಾ ಸಚಿವ ಇಬ್ಬರೂ ಗಾಜಾ ಮೇಲೆ ನಡೆಸಿದ ಭೀಕರ ದಾಳಿಗೆ ಬಂಧನ ವಾರೆಂಟ್ ನೀಡಲಾಗಿದೆ. ಇದೇ ವೇಳೆ ಇಸ್ರೇಲ್ ಈ ವಾರೆಂಟ್ ನಿರಾಕರಿಸದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ.

ಈ ಹೇಳಿಕೆಗೆ ಮುಖ್ಯ ಕಾರಣ ವಿಶ್ವ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ವಿರುದ್ಧ ಖಂಡನೆ ವ್ಯಕ್ತವಾಗಿತ್ತು. ಇದೇ ಸಭೆಯಲ್ಲಿ ಪಾಲ್ಗೊಂಡು ಇಸ್ರೇಲ್ ವಿರುದ್ಧ ತೆಗೆದುಕೊಂಡ ಖಂಡನಾ ನಿರ್ಣಯವನ್ನು ಹರಿದು ಹಾಕಿದ್ದ ನೇತನ್ಯಾಹು, ಹಮಾಸ್ ಉಗ್ರರು ನಮ್ಮ ಅಮಾಯಕ ನಾಗರೀಕರ ಮೇಲೆ, ಹೆಣ್ಣು ಮಕ್ಕಳು, ಮಕ್ಕಳ ಮೇಲೆ ನಡೆಸಿದ ದಾಳಿ ನಿಮಗೆ ಕಾಣಿಸಲಿಲ್ಲವೇ? ಎಂದು ಪ್ರಶ್ನಿಸಿದ್ದರು. ಇಷ್ಟೇ ಅಲ್ಲ ಇಸ್ರೇಲ್ ಉಗ್ರರ ವಿರುದ್ಧ ಹೋರಾಡುತ್ತಿದೆ. ನಾಗರೀಕರ ವಿರುದ್ಧ ಅಲ್ಲ. ಇದಕ್ಕೆ ಖಂಡನೆ ವ್ಯಕ್ತಪಡಿರುವ ಈ ಖಂಡನಾ ನಿರ್ಣಯವನ್ನು ಇಸ್ರೇಲ್ ಪುಟ್ಟ ಬಿಡಿಸಿ ನೋಡುವುದಿಲ್ಲ ಎಂದು ಹರಿದು ಹಾಕಿದ್ದರು. ಇಂತಹ ಯಾವುದೇ ಬೆದರಿಕೆ ಇಸ್ರೇಲ್ ಮುಂದೆ ನಡೆಯಲ್ಲ ಎಂದಿದ್ದರು. ಇಷ್ಟೇ ಅಲ್ಲ ವಿಶ್ವಸಂಸ್ಥೆಯ ಕಾರ್ಯದರ್ಶಿ ಗಾಜಾಗೆ ಭೇಟಿಗೆ ಮುಂದಾಗಿರುವ ಮಾಹಿತಿ ಪಡೆದ ಇಸ್ರೇಲ್, ವಿಶ್ವಸಂಸ್ಥೆ ಕಾರ್ಯದರ್ಶಿ ಅಥವಾ ಪದಾಧಿಕಾರಿಗಳು ಕಾಲು ಇಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದ್ದರು.

ಇದೀಗ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಹೊರಡಿಸಿದ ಅರೆಸ್ಟ್ ವಾರೆಂಟನ್ನು ಇಸ್ರೇಲ್ ತಿರಸ್ಕರಿಸಿದೆ. ಇದು ಉಗ್ರರ ವಿರುದ್ದ ಹೋರಾಟ. ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಹಾಗೂ ಇತರ ಉಗ್ರರ ಸಾಯುವವರಗೂ ವಿರಮಿಸುವುದಿಲ್ಲ. ಹಲವು ಘಟನೆಗಳ ಕುರಿತು ಮೌನವಾಗಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಇಸ್ರೇಲ್ ವಿರುದ್ದ ಹರಿಯಾಯಲು ಬರುತ್ತಿರುವುದೇಕೆ ಎಂದು ಪ್ರಶ್ನಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!