ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಉಭಯ ದೇಶಗಳ 30ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಗಲಾಟೆ ನಡೆದ ಬಗ್ಗೆ ಭಾರತೀಯ ಸೇನೆ ಮೂಲಗಳು ತಿಳಿಸಿವೆ.
ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿ ಭಾಗ ತವಾಂಗ್‌ನಲ್ಲಿ ಡಿಸೆಂಬರ್ 9ರಂದು ಶುಕ್ರವಾರ ತಡರಾತ್ರಿ ಸೇನಾ ಯೋಧರ ನಡುವೆ ಸಂಘರ್ಷ ನಡೆದಿದ್ದು, ಎರಡು ದೇಶದ 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ.
ಇದಾದ ಬಳಿಕ ಉಭಯ ದೇಶದ ಸೇನಾಧಿಕಾರಿಗಳು ಫ್ಲ್ಯಾಗ್ ಮೀಟಿಂಗ್ ನಡೆಸಿ ಶಾಂತಿ ಕಾಪಾಡಲು ತೀರ್ಮಾನಿಸಿದ್ದಾರೆ.
ಗಸ್ತು ವೇಳೆ ಚೀನಾ ಸೇನೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿರುವ ಭಾರತದ ಗಡಿ ಪ್ರವೇಶಿಸಿದೆ. ಇದಕ್ಕೆ ಭಾರತೀಯ ಸೇನಾಪಡೆ ತೀವ್ರ ಆಕ್ಷೇಪಿಸಿದೆ. ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಬಳಿಕ ಭಾರತೀಯ ಯೋಧರು ತಕ್ಕ ತಿರುಗೇಟು ಕೊತ್ತಿದ್ದು, ಚೀನಾ ಸೇನೆ ಗಡಿಯಿಂದ ಕಾಲ್ಕಿತ್ತಿದೆ.