BIG NEWS | ಕೋರಮಂಡಲ್ ಎಕ್ಸ್ ಪ್ರೆಸ್ ಬೆನ್ನಲ್ಲೇ ಒಡಿಶಾದಲ್ಲಿ ಹಳಿತಪ್ಪಿದ ಮತ್ತೊಂದು ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಸೋರ್ ನ ಬಹನಾಗ ನಿಲ್ದಾಣದ ಬಳಿ ಶಾಲಿಮಾರ್-ಚೈನ್ನೈ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಗೂಡ್ಸ್ ಗಾಡಿಗೆ ಡಿಕ್ಕಿಯಾಗಿ ಹಳಿತಪ್ಪಿದ ಬೆನ್ನಲ್ಲೇ, ಬೆಂಗಳೂರು-ಹೌರಾ ರೈಲು ಕೂಡ ಹಳಿತಪ್ಪಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಅವರು, ಒಡಿಶಾದ ಬಾಲಸೋರ್ ನ ಬಹನಾಗದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್ನ 10-12 ಬೋಗಿಗಳು ಬಾಲೇಶ್ವರ್ ಬಳಿ ಹಳಿ ತಪ್ಪಿ ವಿರುದ್ಧ ಹಳಿಗೆ ಬಿದ್ದಿವೆ ಎಂದಿದ್ದಾರೆ.ಇನ್ನೂ ಈ ರೈಲಿನ ಸ್ವಲ್ಪ ಸಮಯದ ನಂತರ ಯಶವಂತಪುರದಿಂದ ಹೌರಾಗೆ ತೆರಳುತ್ತಿದ್ದ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ 3-4 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿಸಿದ್ದಾರೆ.

ರೈಲು ಸಂಖ್ಯೆ 12841 ಯುಪಿ ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 12864 ಡಿಎನ್ ಬೆಂಗಳೂರು-ಹೌರಾ ಒಡಿಶಾದ ಬಹನಾಗ ಬಜಾರ್ ಬಳಿ ಹಳಿ ತಪ್ಪಿದೆ.

ಇದೀಗ ನೈರುತ್ಯ ರೈಲ್ವೆ ಇಲಾಖೆಯಿಂದ ಪ್ರಯಾಣಿಕರ ಸುರಕ್ಷತೆಗಾರಿ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ. ಸಂಬಂಧಪಟ್ಟ ಕುಟುಂಬಸ್ಥರು ಸಂಪರ್ಕಿಸುವಂತೆ ತಿಳಿಸಿದೆ.
ಹೀಗಿವೆ ನೈಋತ್ಯ ರೈಲ್ವೆ ಸ್ಥಾಪಿಸಿದ ಸಹಾಯವಾಣಿ ಸಂಖ್ಯೆಗಳು

ಬೆಂಗಳೂರು 080-22356409

ಬಂಗಾರಪೇಟೆ: 08153 255253

ಕುಪ್ಪಂ : 8431403419

SMVB : 09606005129

KJM :+91 88612 03980

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!