Sunday, December 3, 2023

Latest Posts

BIG NEWS | ದೆಹಲಿಯಲ್ಲಿ ಭೂಕಂಪನ: 4.2ರಷ್ಟು ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯಲ್ಲಿ ಭಾನುವಾರ ಭೂಕಂಪನದ (Earthquake) ಅನುಭವ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು ಆಗಿದೆ.

ನೋಯ್ಡಾ, ಗುರುಗ್ರಾಮ, ಫರಿದಾಬಾದ್, ಗಾಜಿಯಾಬಾದ್​ನಲ್ಲಿ ಭೂಕಂಪನ ಉಂಟಾಗಿದ್ದು, ಜನರು ತಮ್ಮ ಬಹುಮಹಡಿ ಕಟ್ಟಡಗಳು ಮತ್ತು ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ. ಭೂಕಂಪನದಿಂದ ಅದೃಷ್ಟವಶಾತ್​ ಯಾವುದೇ ರೀತಿಯ ಪ್ರಾಣಹಾನಿಗಳು ಸಂಭವಿಸಿಲ್ಲ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಹರಿಯಾಣದ ಫರಿದಾಬಾದ್ನಲ್ಲಿ ಸಂಜೆ 4.08 ಕ್ಕೆ ಭೂಕಂಪನ ಸಂಭವಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!