BIG NEWS | ಲೋಕಸಭೆಯಲ್ಲಿ ಶ್ವೇತ ಪತ್ರ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ವೇತ ಪತ್ರ ಮಂಡಿಸಿದ್ದಾರೆ.

2004ರಿಂದ 2014ರವರೆಗೆ 10 ವರ್ಷ ಯುಪಿಎ ಅಧಿಕಾರದಲ್ಲಿತ್ತು. ಇದಾದ ನಂತರ 2014ರಿಂದ 2024, ಇಲ್ಲಿವರೆಗೆ 10 ವರ್ಷ ಎನ್​ಡಿಎ ಆಡಳಿತ ಇದೆ. ಈ ಎರಡೂ ಆಡಳಿತದಲ್ಲಿ ಆರ್ಥಿಕ ನಿರ್ವಹಣೆ ಹೇಗಿತ್ತು, ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂದು ವಿವರಿಸಿ ಸರ್ಕಾರ ಶ್ವೇತಪತ್ರ ಹೊರಡಿಸಿದೆ.

ಸಂಸತ್ತಿನ ಕಲಾಪದಲ್ಲಿಯೇ ಶ್ವೇತಪತ್ರ ಮಂಡಿಸೋದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಅದಕ್ಕಾಗಿ ಒಂದು ದಿನ ಸಂಸತ್ ಕಲಾಪವನ್ನು ಮುಂದೂಡಿಕೆ ಮಾಡಲಾಗಿತ್ತು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆ ವೇಳೆ ಈ ದುರುಪಯೋಗದ ಬಗ್ಗೆ ಶ್ವೇತಪತ್ರ ಹೊರಡಿಸುವ ಬಗ್ಗೆ ಮಾಹಿತಿ ನೀಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!