BIG NEWS | ಗ್ಯಾಂಗ್‌ಸ್ಟರ್ ಅಮೃತ್‌ಪಾಲ್ ಸಿಂಗ್ ಹತ್ಯೆಗೈದ ಪಂಜಾಬ್ ಪೊಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನಲ್ಲಿ ಭಾರಿ ಸದ್ದು ಮಾಡಿದ ಗ್ಯಾಂಗ್‌ಸ್ಟರ್‌ಗಳನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಗ್ಯಾಂಗ್‌ಸ್ಟರ್ ಅಮೃತ್‌ಪಾಲ್ ಸಿಂಗ್‌ನನ್ನು ಪಂಜಾಬ್ ಪೊಲೀಸರು ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅಮೃತ್‌ಪಾಲ್ ಸಿಂಗ್, ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾನೆ. ತಕ್ಷಣವೇ ಪ್ರತಿದಾಳಿ ನಡೆಸಿದ ಪೊಲೀಸರು ಹತ್ಯೆ ಮಾಡಿದ್ದಾರೆ.

ಆದ್ರೆ ಈಗ ಹತ್ಯೆಯಾಗಿರುವ ಅಮೃತ್‌ಪಾಲ್ ಸಿಂಗ್‌ ಹಾಗೂ ಪಂಜಾಬ್ ಸರ್ಕಾರವನ್ನೇ ನಡುಗಿಸಿ ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್ ಇಬ್ಬರೂ ಬೇರೆ.

22 ವರ್ಷದ ಪಂಜಾಬ್‌ನ ಅಮೃತ್‌ಪಾಲ್ ಸಿಂಜ್ ಗ್ಯಾಂಗ್‌ಸ್ಟರ್ ಆಗಿ ನೆಟ್‌ವರ್ಕ್ ಬೆಳೆಸಿಕೊಂಡಿದ್ದ. ಹೀರೊಯೆನ್ ಸೇರಿದಂತೆ ಇತರ ಮಾದಕ ವಸ್ತುಗಳ ಮಾರಾಟದ ಮೂಲಕ ಪಂಜಾಬ್‌ ಪೊಲೀಸರಿಗೆ ತಲೆನೋವಾಗಿದ್ದನು. ಜೊತೆಗೆ ಮೂರು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದನು.

ಇದೀಗ ಪೊಲೀಸರು ಅಮೃತಪಾಲ್ ಸಿಂಗ್ ಸುತ್ತುವರೆದದೆ ಶರಣಾಗುವಂತೆ ಸೂಚನೆ ನೀಡಿದ್ದರೆ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅಮೃತ್‌ಪಾಲ್ ಸಿಂಗ್ ಪಿಸ್ತೂಲ್ ಮೂಲಕ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಕೆಲ ಪೊಲೀಸರು ಗಾಯಗೊಂಡಿದ್ದಾರೆ. ತಕ್ಷಣವೇ ಪೊಲೀಸರು ಆತ್ಮ ರಕ್ಷಣಗಾಗಿ ಪ್ರತಿದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಅಮೃತ್‌ಪಾಲ್ ಸಿಂಗ್ ಕುಸಿದು ಬಿದ್ದಿದ್ದಾನೆ.ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಗ್ಯಾಂಗ್‌ಸ್ಟರ್ ಅಮೃತ್‌ಪಾಲ್ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಈತನಿಂದ 2 ಕೆಜಿ ಹೆರೊಯಿನ್ ಡ್ರಗ್ಸ್, 2 ಪಿಸ್ತೂಲ್ ಸೇರಿದಂತೆ ಇತರ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!