BIG NEWS | ಬಗೆದಷ್ಟು ಸಿಗುತ್ತಿದೆ ಹಣದ ರಾಶಿ: ಅರ್ಪಿತಾ ಮುಖರ್ಜಿಯ ಮತ್ತೊಂದು ಮನೆ ಮೇಲೆ ಇಡಿ ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿಗೆ ಸೇರಿರುವ ಮತ್ತೊಂದು ಅಪಾರ್ಟ್​​ಮೆಂಟ್ ಮೇಲೆ ಶನಿವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೊಲ್ಕತ್ತಾದ ಬೆಲ್ಗೇರಿಯಾ ಪ್ರದೇಶದಲ್ಲಿರುವ ಅರ್ಪಿತಾ ನಿವಾಸದ ಮೇಲೆ ಇ.ಡಿ ರೇಡ್ ಮಾಡಿದೆ.ಈಗಾಗಲೇ ಅರ್ಪಿತಾಗೆ ಸೇರಿದ 2 ನಿವಾಸಗಳ ಮೇಲೆ ದಾಳಿ ಮಾಡಿದ್ದಾಗ ಸುಮಾರು 45 ಕೋಟಿಗೂ ಹೆಚ್ಚು ಅಕ್ರಮ ಹಣ ಪತ್ತೆಯಾಗಿದೆ.
ಇಂದು ಸಂಸ್ಥೆಯು ಅಲ್ಲಿದ್ದ ಮತ್ತೊಂದು ವಾಹನವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಆ ಫ್ಲಾಟ್‌ಗೆ ಹಣ ಹೇಗೆ ತಲುಪಿತು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅವ್ಯವಹಾರ ನಡೆದಿದೆ ಅನ್ನೋ ಆರೋಪ ಬಂದಿದೆ. ಈ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ನೀಡಿರುವ ಮಾಹಿತಿ ಮೇಲೆ ಪ್ರಕರಣ ದಾಖಲಿಸಿಕೊಂಡು ಇ.ಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.

ಅರ್ಪಿತಾ ಅವರ ವಿವಿಧ ಫ್ಲಾಟ್‌ಗಳಿಂದ ಇಡಿ ಇದುವರೆಗೆ 50 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ. ಮೊದಲ ದಾಳಿಯಲ್ಲಿ ಸಂಸ್ಥೆಯು 21 ಕೋಟಿ ರೂ.ಗಳನ್ನು ಪತ್ತೆ ಮಾಡಿದ್ದು, ಎರಡನೇ ದಾಳಿಯಲ್ಲಿ 30 ಕೋಟಿ ರೂ. ಅರ್ಪಿತಾ ಅವರ ನಿವಾಸದಿಂದ ನಗದು, ಚಿನ್ನ ಮತ್ತು 4.31 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!