SHOCKING NEWS | ಮಂಕಿಪಾಕ್ಸ್: ಎರಡು ದಿನದಲ್ಲಿ ಎರಡು ಜೀವಗಳು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವಕ್ಕೆ ಮಾರಕವಾಗಿರುವ ಮಂಕಿಪಾಕ್ಸ್ ಎರಡನೇ ಸಾವು ಸಂಭವಿಸಿದೆ.
ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಇದರ ನಡುವೆ ಸ್ಪೇನ್‌ನಲ್ಲಿ ಮಂಕಿಪಾಕ್ಸ್ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಕಳೆದ ಎರಡು ದಿನದಲ್ಲಿ ಸ್ಪೇನ್‌ನಲ್ಲಿ ಮಂಕಿಪಾಕ್ಸ್‌ಗೆ ಎರಡು ಬಲಿಯಾಗಿದೆ.
ಶುಕ್ರವಾರ ಮಂಕಿಪಾಕ್ಸ್‌ನಿಂದ ಸ್ಪೇನ್‌ನಲ್ಲಿ ಮೊದಲ ಬಲಿಯಾಗಿದ್ದರೆ, ಶನಿವಾರ ಎರಡನೇ ಬಲಿಯಾಗಿದೆ. ಸದ್ಯ ಸ್ಪೇನ್‌ನಲ್ಲಿ 4,298 ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ.
ಇದೀಗ 80 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. 21,00 ಮಂಕಿಪಾಕ್ಸ್ ಪ್ರಕರಣ ವಿಶ್ವದಲ್ಲಿ ಪತ್ತೆಯಾಗಿದೆ. ಅಮೆರಿಕದಲ್ಲೂ ಮಂಕಿಪಾಕ್ಸ್ ಪ್ರಕರಣ ವೇಗವಾಗಿ ಹರಡುತ್ತಿದೆ. ಇತ್ತ ಸ್ಪೇನ್‌ಲ್ಲಿ ಎರಡು ಸಾವು ತೀವ್ರ ಆತಂಕ ಹೆಚ್ಚಿಸಿದೆ.

ಭಾರತದ ಮೊದಲ ಮಂಕಿಪಾಕ್ಸ್‌ ಸೋಂಕಿತನಾದ ಕೇರಳದ 35 ವರ್ಷದ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!