ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾಗ್ಪುರದಲ್ಲಿ ಲೋಕಮಾನ್ಯ ತಿಲಕ್-ಶಾಲಿಮಾರ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದೆ. ಮೂರು ಬೋಗಿಗಳು ಹಳಿ ತಪ್ಪಿ ದುರ್ಘಟನೆ ಸಂಭವಿಸಿದೆ.
ಮುಂಬೈನಿಂದ ಶಾಲಿಮಾರ್ಗೆ ಸಂಚರಿಸುತ್ತಿದ್ದ ರೈಲು ನಾಗ್ಪುರದ ಸುಭಾಷ್ ಚಂದ್ರ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದೆ. ಸದ್ಯದ ಮಾಹಿತಿ ಪ್ರಕಾರ, ಅದೃಷ್ಠವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಎಸ್1, ಎಸ್2 ಹಾಗೂ ಗೂಡ್ಸ್ ಬೋಗಿಗಳು ಹಳಿ ತಪ್ಪಿದೆ. ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ರೈಲ್ವೇ ಕಂಟ್ರೋಲ್ ರೂಂ ಈ ಮಾರ್ಗದಲ್ಲಿ ಸಾಗುವ ರೈಲು ಸಂಚಾರ ಬೇರೆಗೆ ವರ್ಗಾಯಿಸಿದೆ. ಇಷ್ಟೇ ಅಲ್ಲ ಹಲವು ರೈಲುಗಳು ಸಂಚಾರ ಸ್ಥಗಿತಗೊಳಿಸಲಾಗಿದೆ.
ರೈಲು ಹಳಿ ತಪ್ಪಿದ ಹಿಂದಿನ ಕಾರಣ ಶೋಧ ಆರಂಭಗೊಂಡಿದೆ.
ಇತರ ರೈಲುಗಳು ಹಳಿ ತಪ್ಪಿದಂತೆ ಲೋಕಮಾನ್ಯ ತಿಲಕ-ಶಾಲಿಮಾರ್ ಎಕ್ಸ್ಪ್ರೆಸ್ ಹಳಿ ತಪ್ಪಿದ ಹಿಂದೆ ಷಡ್ಯಂತ್ರದ ಅನುಮಾನಗಳು ಕಾಡಕೊಡಗಿದೆ. ಉದ್ದೇಶಪೂರ್ವಕವಾಗಿ ರೈಲು ಹಳಿಗಳಿಗೆ ಹಾನಿ ಮಾಡಿ ಹಳಿ ತಪ್ಪಿಸಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೂರು ಬೋಗಿಗಳು ಹಳಿ ತಪ್ಪಿದೆ. ಆದರೆ ಲೋಕೋಪೈಲೆಟ್ ಜಾಗರೂಕತೆಯಿಂದ ತಕ್ಷಣವೇ ರೈಲು ನಿಲ್ಲಿಸಲಾಗಿದೆ. ರೈಲಿನ ವೇಗ ಕಡಿಮೆಯಾಗಿದ್ದ ಕಾರಣ ದುರಂತ ತಪ್ಪಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.