BIG NEWS | NIA ಅಧಿಕಾರಿಗಳಿಂದ ಪಿಎಫ್‌ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಷ್ಟ್ರೀಯ ತನಿಖಾ ಸಂಸ್ಥೆ ಪಿಎಫ್‌ಐ ರಾಜ್ಯಾಧ್ಯಕ್ಷ ಯಾಸಿರ್​ ಹಸನ್​ ಎಂಬಾತನನ್ನು ಬಂಧಿಸಿದೆ. ಉಗ್ರ ಚಟುವಟಿಕೆಗಳಿಗೆ ಹಣ ಫಂಡಿಂಗ್​ ಮಾಡುತ್ತಿದ್ದ ಆರೋಪದ ಮೇಲೆ ಬಂಧನ ಮಾಡಲಾಗಿದೆ.

ಯಾಸಿರ್​ ಹಸನ್​ ಬೆಂಗಳೂರಿನ ಆರ್ ಟಿ ನಗರದ ನಿವಾಸಿಯಾಗಿದ್ದಾನೆ. ದೇಶದ ಒಳಗೆ ಹಾಗೂ ವಿದೇಶಗಳಿಂದ ಹಣವನ್ನು ಒಗ್ಗೂಡಿಸಿ, ಅದನ್ನು ಟೆರರ್ ಫಂಡಿಂಗ್​ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಆತನನ್ನು ದೆಹಲಿಯಲ್ಲಿರುವ ಎನ್​ಐಎ ಸ್ಪೆಷಲ್ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು.

ಮುಸ್ಲಿಂ ಯುವಕರ ತಲೆಕೆಡಿಸಿ, ಅವರನ್ನು ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಲು ಹಾಗೂ ಐಸಿಸ್​ಗೆ ಸೇರಲು ಒತ್ತಾಯಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಮಾರಕಾಸ್ತ್ರಗಳನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತಿದ್ದ ಎನ್ನಲಾಗ್ತಿದೆ. ಈತನನ್ನು ಐಪಿಸಿ ಸೆಕ್ಷನ್ 120, 153a, section 17 ,18,18B,20,22B,38,39 of UAPA ಕಾಯ್ದೆ ಅಡಿ ಬಂಧನ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!