Saturday, December 9, 2023

Latest Posts

BIG NEWS | ಟೆನಿಸ್ ಲೋಕಕ್ಕೆ ವಿದಾಯ ಘೋಷಿಸಿದ ದಿಗ್ಗಜ ರೋಜರ್ ಫೆಡರರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೆನಿಸ್ ಲೋಕದ ದಿಗ್ಗಜ, 20 ಗ್ರ್ಯಾಂಡ್ ಸ್ಲಾಂ ಒಡೆಯ ರೋಜರ್ ಫೆಡರರ್ ಟೆನಿಸ್ ಲೋಕಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಸ್ವಿಟ್ಜರ್‌ಲೆಂಡ್‌ನ ಟೆನಿಸ್ ಕ್ರೀಡಾಪಟು 41 ವರ್ಷದ ರೋಜರ್ ಫೆಡರರ್, ಭಾವುಕ ಪತ್ರದೊಂದಿಗೆ ವಿದಾಯ ಘೋಷಿಸಿದ್ದಾರೆ.

ಫೆಡರರ್ ಕಾರಣದಿಂದಲೇ ಹಲವರು ಟೆನಿಸ್ ಕ್ರೀಡೆ ಆಡಲು ಆರಂಭಿಸಿದ್ದರೆ, ಅಸಂಖ್ಯಾತ ಅಭಿಮಾನಿಗಳು ಫೆಡರರ್ ಆಟ ನೋಡಲು ಟೆನಿಸ್‌ನತ್ತ ತಿರುಗಿದ ಅದೆಷ್ಟೋ ಉದಾಹಣೆಗಳಿವೆ.

ನನಗೆ 41 ವರ್ಷ, ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಹೊಂದಲು ಬಯಸುತ್ತಿದ್ದೇನೆ. ನನ್ನ ಟೆನಿಸ್ ಪಯಣವನ್ನು ಮತ್ತಷ್ಟು ರೋಚಕವಾಗಿಸಿದ ಪ್ರತಿ ಸ್ಪರ್ಧಿಗಳು, ಅಭಿಮಾನಿಳಿಗೆ ಚಿರಋಣಿ ಎಂದು ಫೆಡರರ್ ಹೇಳಿದ್ದಾರೆ.

ಕಳೆದ 24 ವರ್ಷಗಳಲ್ಲಿ ನಾನು 1,500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ನಾನು ಕನಸಿಗೂ ನಿಲುಕದಷ್ಟು ಟೆನಿಸ್ ನನ್ನನ್ನೂ ಅತ್ಯಂತ ಪ್ರೀತಿಯಿಂದ ಹಾಗೂ ಉದಾರವಾಗಿ ನಡೆಸಿಕೊಂಡಿದೆ. ಇದೀಗ ನಾನು ಅರ್ಥಮಾಡಿಕೊಳ್ಳಬೇಕಾದ ಸಮಯ. ನನ್ನ ಸ್ಪರ್ಧಾತ್ಮಕ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಇದನ್ನು ನಾನು ಗುರುತಿಸಬೇಕು. ಗೌರವಿಸಬೇಕು. ಈ ಸಂದರ್ಭದಲ್ಲಿ ನಾನು ಹಲವರಿಗೆ ಚಿರಋಣಿಯಾಗಿದ್ದೇನೆ. ಪ್ರತಿ ನಿಮಿಷವೂ ನನ್ನ ಪರವಾಗಿ ನಿಂತು, ನನ್ನ ಸೋಲು ಗೆಲುವುಗಳಲ್ಲಿ ಬೆಂಬಲ ಸೂಚಿಸಿದ ಪತ್ನಿ ಮಿರ್ಕಾಗೆ ಧನ್ಯವಾದ. ಪ್ರತಿ ಪಂದ್ಯಕ್ಕೂ ಮುನ್ನ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದಳು. 8 ತಿಂಗಳ ಗರ್ಭಿಣಿಯಾಗಿದ್ದಾಗಲೂ ಲೆಕ್ಕವಿಲ್ಲದಷ್ಟು ಪಂದ್ಯಗಳನ್ನು ವೀಕ್ಷಿಸಿದ್ದಾಳೆ. ಕಳೆದ 20 ವರ್ಷಗಳಿಂದ ನನ್ನ ತಂಡದ ಜೊತೆ ನನ್ನನ್ನ ಸಹಿಸಿಕೊಂಡಿದ್ದಾಳೆ. ಸ್ಪರ್ಧಾತ್ಮಕ ಟೆನಿಸ್ ಪಯಣದಲ್ಲಿ ನನ್ನ ಎದುರಾಳಿಗಳಾಗಿ ಹೋರಾಡಿದ, ನನ್ನ ಆಟವನ್ನು ಮತ್ತಷ್ಟು ಚುರುಕಾಗಿಸಿದ ಪ್ರತಿಸ್ಪರ್ಧಿಗಳು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಎಂದು ರೋಜರ್ ಫೆಡರರ್ ಹೇಳಿದ್ದಾರೆ.

ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೆವರ್ ಕಪ್ ರೋಜರ್ ಫೆಡರರ್ ಅವರ ಕೊನೆಯ ಎಟಿಪಿ ಟೂರ್ನಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!