Wednesday, June 7, 2023

Latest Posts

BIG NEWS | ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಿತ್ರನಟ ಶರತ್ ಬಾಬು ಅವ್ರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ.

ನಟನ ಆರೋಗ್ಯ ಚಿಂತಾಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇಡೀ ದೇಹಕ್ಕೆ ಸೋಂಕು ತಗುಲಿದ್ದರಿಂದ ಕಿಡ್ನಿ, ಶ್ವಾಸಕೋಶ, ಯಕೃತ್ ಮತ್ತಿತರ ಅಂಗಾಂಗಗಳ ಮೇಲೆ ಪರಿಣಾಮ ಬೀರಿದೆ ಎಂದು ಆಸ್ಪತ್ರೆ ಮೂಲಗಳು ಬಹಿರಂಗಪಡಿಸಿವೆ.
ಸದ್ಯ ಶರತ್‌ಬಾಬು ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ತಿಂಗಳ 20ರಂದು ಹೈದರಾಬಾದ್‌’ನಲ್ಲಿರುವ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಗೆ ದಾಖಲಾಗಿದ್ದು,ಅನಾರೋಗ್ಯದಿಂದ ಕೆಲ ದಿನಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಬಾಬು ಅವ್ರನ್ನ ಕುಟುಂಬ ಸದಸ್ಯರು ಹೈದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ (ಎಐಜಿ ಆಸ್ಪತ್ರೆ)ಗೆ ಸ್ಥಳಾಂತರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!