Thursday, December 8, 2022

Latest Posts

BIG NNEWS | ಯಾದವ್-ಕೊಹ್ಲಿ ಆಕರ್ಷಕ ಬ್ಯಾಟಿಂಗ್: ಸರಣಿ ಗೆದ್ದು ಸಂಭ್ರಮಿಸಿದ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೂರ್ಯ ಕುಮಾರ್ ಯಾದವ್ , ಕೊಹ್ಲಿ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.

ಮೊದಲ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 186 ರನ್​ಗಳ ಗಳಿಸಿ ಭಾರತಕ್ಕೆ 187 ಟಾರ್ಗೆಟ್ ನೀಡಿದ್ದರು. ಇದನ್ನ ಬೆನ್ನತ್ತಿದ್ದ ರೋಹಿತ್ ಪಡೆ ಗೆ ಆರಂಭದಲ್ಲಿ ಕೆಎಲ್ ರಾಹುಲ್ ಶಾಕ್ ನೀಡಿದ್ದು, ಒಂದು ರನ್ ಗೆ ಔಟಾಗಿದ್ದಾರೆ. ಬಳಿಕ ಬಂದ ಕೊಹ್ಲಿ ನಾಯಕ ರೋಹಿತ್ ಗೆ ಸಾಥ್ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ 17 ರನ್ ಗಳಿಸಿದ್ದ ವೇಳೆ ರೋಹಿತ್ ವಿಕೆಟ್ ಒಪ್ಪಿಸಿದರು. ಮತ್ತೆ ಬಂದ ಯಾದವ್ ಕೊಹ್ಲಿಗೆ ಉತ್ತಮ ಜೊತೆ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇಬ್ಬರು ಆಸೀಸ್ ಬೌಲರ್ ಗಳ ಬೆವರಿಸಿದರು.

69 ರನ್ ಗಳಿಸಿದ ವೇಳೆ ಯಾದವ್ ಔಟಾದರು. ಬಳಿಕ ಬಂದ ಪಾಂಡ್ಯ ಕೊಹ್ಲಿ ಜೊತೆಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆ ಕ್ಷಣದಲ್ಲಿ ಕೊಹ್ಲಿ 63 ಗೆ ಔಟಾದರು. ಈ ವೇಳೆ ಬಂದ ಕಾರ್ತಿಕ್ ಪಾಂಡ್ಯ ಗೆ ಸಾಥ್ ನೀಡಿ ಟೀಮ್ ಇಂಡಿಯಾ ಗೆಲುವಿಗೆ ಕಾಣಿಕೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ ಸರಣಿ 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!