ನೂಪುರ್ ಶರ್ಮಾ ಗೆ ಬಿಗ್ ರಿಲೀಫ್: ಬಂಧನ ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲು ಸುಪ್ರೀಂ ನಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂಪುರ್ ಶರ್ಮಾ ವಿರುದ್ಧ ಬಂಧನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಸ್ವೀಕರಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಟಿವಿ ವಾಹಿನಿಯಲ್ಲಿ ಚರ್ಚೆ ವೇಳೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಗಳನ್ನ ನೀಡಿದ್ದರು.

ತದನಂತರ ಸುಪ್ರೀಂಕೋರ್ಟ್ʼನ ಪೀಠವು ನೂಪುರ್ ಹೇಳಿಕೆಗಳನ್ನ ತೀವ್ರವಾಗಿ ಖಂಡಿಸಿತ್ತು.

ಬಳಿಕ ಕೋರ್ಟ್ , ನೂಪುರ್ ಶರ್ಮಾ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನ ನ್ಯಾಯಾಲಯವು ಮುಟ್ಟುಗೋಲು ಹಾಕಿಕೊಂಡು ಅವುಗಳನ್ನ ದೆಹಲಿಗೆ ವರ್ಗಾಯಿಸಿತ್ತು.

ಅದೇ ಸಮಯದಲ್ಲಿ, ಎಫ್‌ಐಆರ್ ರದ್ದುಗೊಳಿಸಲು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್ ನೂಪುರ್ ಶರ್ಮಾಗೆ ಸ್ವಾತಂತ್ರ್ಯ ನೀಡಿದೆ. ಅಂದ್ಹಾಗೆ, ನೂಪುರ್ ಶರ್ಮಾ ಜೀವಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಆದೇಶವನ್ನ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!