ಬಿಗ್‌ ಸ್ಕ್ಯಾಮ್‌! ವೀಡಿಯೋಗೆ ಲೈಕ್ ಕೊಟ್ಟು ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇತ್ತೀಚೆಗೆ ಆನ್‌ಲೈನ್‌ ಸ್ಕ್ಯಾಮ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ಹೊಸ ಸ್ಕ್ಯಾಮ್‌ ಒಂದು ಜನರ ನಿದ್ದೆಗೆಡಿಸಿದೆ.  ಯುಟ್ಯೂಬ್ ವೀಡಿಯೊಗಳಿಗೆ ಲೈಕ್ ಕೊಟ್ಟರೆ, ಹಣ ನೀಡುತ್ತೇವೆಂದು ಹೇಳಿ ವಂಚಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ದಕ್ಷಿಣ ಕನ್ನಡದ ವ್ಯಕ್ತಿಯೊಬ್ಬರು ಈ ವಂಚಕರ ಬಲೆಗೆ ಬಿದ್ದಿದ್ದು, ಲಕ್ಷಾಂತರ ರುಪಾಯಿ ಹಣ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರುದಾರರು ಇನ್‌ಸ್ಟಾಗ್ರಾಂನಲ್ಲಿ ಆನ್‌ಲೈನ್‌ ಅರ್ನಿಂಗ್‌ ಲಿಂಕ್‌ ಕ್ಲಿಕ್‌ ಮಾಡಿದ್ದು, ಈ ವೇಳೆ 9733674701 ನಂಬರಿನ ವಾಟ್ಸ್‌ ಅಪ್‌ ಚಾಟ್‌ ತೆರೆದಿದೆ. ಅದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಾನು ಕಳಿಸಿದ ವೀಡಿಯೋಕ್ಕೆ ಲೈಕ್‌ ಮಾಡಿದರೆ 123 ರಿಂದ 5,000 ರೂ. ವರೆಗೆ ಗಳಿಸಬಹುದು ಎಂದು ತಿಳಿಸಿದ್ದಾನೆ ಇದನ್ನು ನಂಬಿದ ದೂರುದಾರರು ವೀಡಿಯೊಗಳಿಗೆ ಲೈಕ್‌ ಕೊಟ್ಟಿದ್ದರು.

ಬಳಿಕ ಆರೋಪಿಯು ಟೆಲಿಗ್ರಾಮ್‌ ಅಪ್ಲಿಕೇಶನ್‌ ಲಿಂಕ್‌ ಕಳಿಸಿ, ಲೈಕ್‌ ಮಾಡಿದ್ದಕ್ಕೆ 123 ರೂ.ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿದ್ದ. ಬಳಿಕ ಆರೋಪಿಗಳು ದೂರುದಾರರೊಂದಿಗೆ ಮತ್ತೆ ಚಾಟ್‌ ಮಾಡಿ ಇದೇ ರೀತಿ ಹೆಚ್ಚು ಗಣ ಗಳಿಸಬಹುದು ಎಂದು ನಂಬಿಸಿ ದೂರುದಾರರನ್ನು ಡಿ929ಗ್ಲೋಬಲ್‌ ಹೈ ಸ್ಯಾಲರಿ ಗ್ರೂಪ್‌ ಎಂಬ ಟೆಲಿಗ್ರಾಮ್‌ ಗ್ರೂಪಿಗೆ ಸೇರಿಸಿ ಲಿಂಕ್‌ವೊಂದನ್ನು ಕಳಿಸಿದ್ದ.

ಆರೋಪಿಗಳು ಅನಿಲ್‌ ಸಿಂಗ್‌, ತ್ರಿಶಾ ವರ್ಮ ಎಂಬ ಯೂಸರ್‌ ನೇಂನಿಂದ ಚಾಟ್‌ ಮಾಡಿ, 5000 ರೂ. ಜಮೆ ಮಾಡುವಂತೆ ತಿಳಿಸಿದ್ದರು. ದೂರುದಾರರು 5,000 ರೂ. ಜಮೆ ಮಾಡಿ, ಅವರು ಹೇಳಿದ ಟಾಸ್ಕ್ ಪೂರ್ಣಗೊಳಿಸಿ, ಹಣ ತೆಗೆಯಲು ಹೋಗಿದ್ದರು. ಆಗ ವಂಚಕರು ನೀವು ತಪ್ಪು ಮಾಡಿದ್ದೀರಾ, 5000 ರೂ. ಬೇಕಾದರೆ 50 ಸಾವಿರ ಇರಿಸುವಂತೆ ಕೇಳಿದ್ದರು. ಇದೇ ರೀತಿ ತಪ್ಪಿರುವುದಾಗಿ ಹೇಳಿ ನಂಬಿಸಿ ಹಣ ಪಡೆಯುತ್ತಾ ಹೋಗಿದ್ದಾರೆ. ಇದರಂತೆ ದೂರುದಾರರು ಒಟ್ಟು 5,09,000 ರೂ. ಮೊತ್ತವನ್ನು ವಿವಿಧ ಖಾತೆಗಳಿದೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಆರೋಪಿಗಳು ಹಣವನ್ನು ಮರಳಿಸದೆ ವಂಚನೆ ಮಾಡಿದ್ದಾರೆಂದು ತಿಳಿದುಬಂದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!