ನೀರವ್‌ ಮೋದಿಗೆ ಭಾರೀ ಹಿನ್ನೆಡೆ: ಗಡಿಪಾರು ವಿರುದ್ಧ ಮೇಲ್ಮನವಿ ಸಲ್ಲಿಸಲು ಲಂಡನ್‌ ಹೈಕೋರ್ಟ್‌ ನಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಆರೋಪಿ, ವಜ್ರದ ವ್ಯಾಪಾರಿ ನೀರವ್‌ ಮೋದಿ ತಮ್ಮ ವಿರುದ್ಧದ ಗಡಿಪಾರು ಕೇಸ್‌ ವಿರುದ್ಧ ಬ್ರಿಟನ್ ನ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಲಂಡನ್‌ ಹೈಕೋರ್ಟ್‌ ಅನುಮತಿಯನ್ನು ನಿರಾಕರಿಸಿದೆ.

ನೀರವ್‌ ಮೋದಿ ಪರ ವಕೀಲ , ಭಾರತಕ್ಕೆ ಗಡಿಪಾರು ಮಾಡಿದರೆ, ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆತನ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿ ಇಲ್ಲ ಎಂದು ವಾದಿಸಿದ್ದರು.

ಆದ್ರೆ ಭಾರತಕ್ಕೆ ಗಡಿಪಾರಾದ ಬಳಿಕ ಮುಂಬಯಿನ ಅರ್ಥರ್‌ ರಸ್ತೆಯ ಕಾರಾಗೃಹದಲ್ಲಿ ನೀರವ್‌ ಮೋದಿ ಸುರಕ್ಷಿತವಾಗಿ ಇರಬಹುದು ಎಂದು ನ್ಯಾಯಾಧೀಶ ಜೆರ್ಮಿ ಸ್ಟುವರ್ಟ್‌ ಸ್ಮಿತ್‌ ಹೇಳಿದರು.

ನೀರವ್‌ ಮೋದಿ 2018ರಲ್ಲಿ ಭಾರತದಿಂದ ಪಲಾಯನ ಮಾಡಿದ್ದು, 2019ರಲ್ಲಿ ನೀರವ್‌ ಮೋದಿಯನ್ನು ಲಂಡನ್‌ನಲ್ಲಿ ಬಂಧಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!