ಅಭಿಮಾನಿಗಳಿಗೆ ಬಿಗ್ ಶಾಕ್: ನಟನೆಗೆ ‘ದಳಪತಿ ವಿಜಯ್’ ಗುಡ್ ಬೈ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ವಿಜಯ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡುವ ಪ್ಲಾನ್ ಮಾಡಿದ್ದು , ಚಿತ್ರರಂಗಕ್ಕೆ ದಳಪತಿ ಗುಡ್ ಬೈ ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಇದಕ್ಕೆ ಕಾರಣ ಇಂದು ಹೊಸ ರಾಜಕೀಯ ಪಕ್ಷವನ್ನು ನಟ ದಳಪತಿ ವಿಜಯ್ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ರಾಜಕೀಯದಲ್ಲಿ ಸಕ್ರೀಯವಾಗೋ ನಿಟ್ಟಿನಲ್ಲಿ ಇನ್ನು ಚಲನಚಿತ್ರಗಳಲ್ಲಿ ನಡಿಸೋದಿಲ್ಲ ಎಂಬುದಾಗಿ ಹೇಳಿದ್ದಾರೆ.

2 ಸಿನಿಮಾಗಳು ಕಂಪ್ಲೀಟ್ ಆದ ಬಳಿಕ ಸಂಪೂರ್ಣವಾಗಿ ಸಿನಿಮಾರಂಗವನ್ನು ಬಿಡುತ್ತೇನೆ ಎಂದು ವಿಜಯ್ ಹೇಳಿದ್ದಾರೆ . ‘ಗೋಟ್’ ವಿಜಯ್ ಅವರ ಕೊನೆ ಸಿನಿಮವಾಗಲಿದೆ.

ವೆಂಕಟ್ ಪ್ರಬಾಹು ನಿರ್ದೇಶನದ ‘ದಿ ಗ್ರೇಟೆಸ್ಟ್ ಆಫ್ ಆಲ್ ಸಾರ್ವಂ’ (ಜಿಒಟಿ) ಚಿತ್ರದ ಚಿತ್ರೀಕರಣದಲ್ಲಿರುವ ನಟ ವಿಜಯ್ ಇಂದು ತಮ್ಮ ಪಕ್ಷದ ಹೆಸರನ್ನು ಬಹಿರಂಗಪಡಿಸುವ ಮೂಲಕ ತಮ್ಮ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಆದ್ರೆ ಈ ಕುರಿತಂತೆ ಹೊಸ ಪಕ್ಷ ಘೋಷಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಎರಡು ಚಿತ್ರಗಳನ್ನು ಈಗ ಒಪ್ಪಿಕೊಂಡಿದ್ದೇನೆ. ಅವುಗಳ ಶೂಟಿಂಗ್ ನಡೆಯುತ್ತಿದೆ. ಅವುಗಳಲ್ಲಿ ಭಾಗಿಯಾಗೋ ಕಾರಣ, ಸ್ವಲ್ಪ ದಿನ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದರು.

ಎರಡು ಚಿತ್ರಗಳ ಶೂಟಿಂಗ್ ನಡೆಯುತ್ತಿವೆ. ಅವುಗಳು ಮುಕ್ತಾಯಗೊಂಡ ನಂತ್ರ ನಾನು ಚಿತ್ರರಂಗದಲ್ಲಿ ನಟನೆ ಮಾಡೋದಿಲ್ಲ. ನನ್ನ ಹೊಸ ಪಕ್ಷ ತಮಿಳುಗ ವೆಟ್ರಿ ಕಳಗಂ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.

ನಮ್ಮ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಯಾವ ಪಕ್ಷಕ್ಕೂ ಬೆಂಬಲ ನೀಡೋದಿಲ್ಲ. ಮುಂಬರುವಂತ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯೋದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!