ಮಾಂಸಪ್ರಿಯರಿಗೆ‌ ಬಿಗ್ ಶಾಕ್: ಚಿಕನ್, ಮಟನ್, ಮೊಟ್ಟೆಗಳ‌ ಬೆಲೆ‌ ಗಗನಕ್ಕೆ ಏರಿಕೆ‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಸಿಗೆಯಲ್ಲಿ, ಜನರು ಕಡಿಮೆ ಮೊಟ್ಟೆ ಮತ್ತು ಮಾಂಸವನ್ನು ತಿನ್ನುತ್ತಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮಾಂಸ ಖರೀದಿಸಿ ಬಿಸಿಯೂಟಕ್ಕೆ ರುಚಿಕರವಾದ ಅಡುಗೆ ತಯಾರಿಸಬೇಕಿದ್ದ ಮಾಂಸಾಹಾರಿಗಳು ಬೆಲೆ ಏರಿಕೆಯಿಂದ ಬೆಚ್ಚಿಬಿದ್ದಿದ್ದಾರೆ. ಚಿಕನ್ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಬೆಲೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದಿನಿಂದಲೂ ತರಕಾರಿಗಳ ಬೆಲೆ ಏರುತ್ತಲೇ ಇದೆ. ಸದ್ಯ ಹವಾಮಾನ ವೈಪರೀತ್ಯದಿಂದ ಮಾಂಸ, ಮೊಟ್ಟೆ ಬೆಲೆ ಗಗನಕ್ಕೇರಿದೆ. 1 ಕೆಜಿ ಕೋಳಿಗೆ 380 ರೂ. 1 ಕೆಜಿ ಮಟನ್‌ಗೆ 800 ರೂ. ಮೊಟ್ಟೆಗೆ 7-8 ರೂ. ಏರಿಕೆ ಮಾಡಲಾಗಿದೆ.

ಬೇಸಿಗೆ ಕಾಲವಾದ್ದರಿಂದ ಈ ವರ್ಷ ಹೆಚ್ಚು ಕೋಳಿ ಸಾಕುವುದಿಲ್ಲ. ಅದಕ್ಕೆ ಈಗ ಭಾರಿ ಬೇಡಿಕೆ ಬಂದಿದೆ. ಬೇಡಿಕೆಗೆ ತಕ್ಕಂತೆ ಕೋಳಿ ಮಾಂಸದ ಕೊರತೆಯಿಂದ ಮಾಂಸ ಉತ್ಪನ್ನಗಳ ಬೆಲೆಯೂ ಹೆಚ್ಚಾಗಿದೆ ಎನ್ನುತ್ತಾರೆ ಮಾಂಸ ವ್ಯಾಪಾರಿ ಅಬ್ದುಲ್ಲಾ ಖಾನ್. ಮುಂದಿನ ಒಂದು ತಿಂಗಳವರೆಗೂ ಮಾಂಸದ ಬೆಲೆ ಹೆಚ್ಚಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!